ಅಫ್ಘಾನಿಸ್ತಾನ: ಬಸ್‌ ಸ್ಫೋಟಕ್ಕೆ ಕನಿಷ್ಠ 7 ಮಂದಿ ಸಾವು!

masthmagaa.com:

ಬಸ್‌ವೊಂದು ಸ್ಫೋಟಗೊಂಡು ಕನಿಷ್ಠ 7 ಮಂದಿ ಸಾವನ್ನಪ್ಪಿ, ಕನಿಷ್ಠ 20 ಜನ ಗಾಯಗೊಂಡಿರೋ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಪಶ್ಚಿಮ ಭಾಗದಲ್ಲಿರುವ ದಷ್ಟಿ ಬಾರ್ಚಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು ಅನ್ನೋದು ಸದ್ಯಕ್ಕೆ ತಿಳಿದುಬಂದಿಲ್ಲ. ತನಿಖೆ ಆರಂಭಿಸಲಾಗಿದೆ ಅಂತ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ. ಇನ್ನು ಯಾವ ಸಂಘಟನೆಯೂ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ಆದರೆ ಐಎಸ್ ಸಂಘಟನೆ ಶಿಯಾ ಸಮುದಾಯವನ್ನ ಗುರಿಯಾಗಿಸಿ ಶಾಲೆಗಳು, ಆಸ್ಪತ್ರೆ ಹಾಗೂ ಮಸೀದಿಗಳ ಮೇಲೆ ಇದೇ ಸ್ಥಳದಲ್ಲಿ ಈ ಹಿಂದೆ ದಾಳಿ ನಡೆಸಿತ್ತು. ಹೀಗಾಗಿ ಈ ಸ್ಫೋಟದ ಹಿಂದೆಯೂ ಐಎಸ್‌ ಕೈವಾಡವಿರಬಹುದು ಅಂತ ಶಂಕಿಸಲಾಗಿದೆ.

-masthmagaa.com

Contact Us for Advertisement

Leave a Reply