ಜೋರಾಯ್ತು ಇಸ್ರೇಲ್​-ಸಿರಿಯಾ ಫೈಟ್! ಇಸ್ರೇಲ್​​ನಿಂದ ಹೊಸ ಅಸ್ತ್ರ ಪರೀಕ್ಷೆ

masthmagaa.com:

ಸಿರಿಯಾ – ಇಸ್ರೇಲ್‌ ನಡುವಿನ ಮುನಿಸು ತೀವ್ರ ಸ್ವರೂಪಕ್ಕೆ ತಿರುಗ್ತಿರೋ ಹೊತ್ತಲ್ಲೇ ಸಿರಿಯಾ ರಾಜಧಾನಿ ಡಮಾಸ್ಕಸ್‌ ಮೇಲೆ ಇಸ್ರೇಲ್‌ ಏರ್ ಸ್ಟ್ರೈಕ್‌ ಮಾಡಿದೆ ಅಂತ ವರದಿಯಾಗಿದೆ. ಗುರುವಾರ ಈ ದಾಳಿ ನಡೆದಿದ್ದು ಸಿರಿಯಾದ ಸರ್ಕಾರಿ ಕಟ್ಟಡಗಳನ್ನ ಟಾರ್ಗೆಟ್‌ ಮಾಡಲಾಗಿದೆ ಅಂತ ಹೇಳಲಾಗಿದೆ. ಇನ್ನು ಸಾವು ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ. ಇದರ ಬೆನ್ನಲ್ಲೇ ಇಸ್ರೇಲ್‌ನ ಹೊಸ ಲೇಸರ್‌ ಗೈಡೆಡ್‌ ಕ್ಷಿಪಣಿ ವ್ಯವಸ್ಥೆಯನ್ನ ಸಿದ್ದಪಡಿಸಿದ್ದು ಪರೀಕ್ಷೆ ಯಶಸ್ವಿಯಾಗಿದೆ. ಈ ಬಗ್ಗೆ ಹೇಳಿಕೆ ನೀಡಿರೋ ಇಸ್ರೇಲ್‌ನ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್‌, ‘ನಾವು ಹೊಸ ಕ್ಷಿಪಣಿ ವ್ಯವಸ್ಥೆಯೊಂದರ ಯಶಸ್ವಿ ಪರೀಕ್ಷೆ ನಡೆಸಿದ್ದೀವಿ. ಇಸ್ರೇಲ್‌ ಸೇನೆಯ ಪಾಲಿಗೆ ಇದು ಗೇಮ್‌ ಚೇಂಜರ್‌ ಆಗಿದ್ದು, ಆದಷ್ಟು ಬೇಗ ಸೇನೆಗೆ ಸೇರಿಸಿಕೊಳ್ತೀವಿ’ ಎಂದಿದ್ದಾರೆ.

ಇನ್ನೊಂದ್‌ ಕಡೆ ಇಸ್ರೇಲ್‌ನ ರಾಜಧಾನಿ ಜೆರುಸಲೇಂನ ಅಲ್‌ ಅಕ್ಸಾ ಮಸೀದಿ ಬಳಿ ಪ್ಯಾಲೆಸ್ತೇನ್‌ ಮತ್ತು ಇಸ್ರೇಲ್‌ ರಕ್ಷಣಾ ಪಡೆಗಳ ನಡುವೆ ಗಲಾಟೆ ನಡೆದು 100ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ 90ಕ್ಕು ಹೆಚ್ಚು ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗ್ತಾ ಇದೆ. ಇಸ್ರೇಲ್‌ನ ಮೂವರು ಪೊಲೀಸರಿಗೂ ಗಾಯಗಳಾಗಿವೆ.

-masthmagaa.com

Contact Us for Advertisement

Leave a Reply