ಮಾರ್ಗ ಮಧ್ಯೆ ತೀವ್ರ ಕಂಪನಕ್ಕೆ ಒಳಗಾದ ವಿಮಾನ: ಗಾಯಗೊಂಡ ಪ್ರಯಾಣಿಕರು

masthmagaa.com:

ದಿಲ್ಲಿಯಿಂದ ಸಿಡ್ನಿಗೆ ಹಾರಾಟ ನಡೆಸಿದ್ದ ವಿಮಾನದಲ್ಲಿ ಮಾರ್ಗ ಮಧ್ಯೆ ತೀವ್ರ ಟರ್ಬುಲೆನ್ಸ್‌ ಸಮಸ್ಯೆ ಉಂಟಾಗಿ 7 ಪ್ರಯಾಣಿಕರು ಗಾಯಗೊಂಡಿದ್ದಾರೆ. ಏರ್‌ ಇಂಡಿಯಾದ ಬೋಯಿಂಗ್‌ 787-800 ವಿಮಾನ ಮಾರ್ಗ ಮಧ್ಯೆ ತೀವ್ರ ಕಂಪನಕ್ಕೆ ಒಳಗಾದ ಕಾರಣ, ಕೆಲ ಪ್ರಯಾಣಿಕರಿ ಸೀಟ್‌ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಇದೇ ವಿಮಾನದಲ್ಲಿ ಓರ್ವ ಡಾಕ್ಟರ್‌ ಹಾಗೂ ನರ್ಸ್‌ ಸೇರಿ ಗಾಯಗೊಂಡಿವ್ರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ವಿಮಾನ ಲ್ಯಾಂಡ್ ಆದ ತಕ್ಷಣ ಗಾಯಗೊಂಡ ಪ್ರಯಾಣಿಕರಿಗೆ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಅಂತ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಹೇಳಿದೆ.

-masthmagaa.com

Contact Us for Advertisement

Leave a Reply