ಯೋಗದ ಹೆಸರಲ್ಲಿ ಮಹಿಳೆಯರನ್ನು ವ್ಯಭಿಚಾರಕ್ಕೆ ನೂಕುತ್ತಿದ್ದ ಗುರು ಅರೆಸ್ಟ್!‌

masthmagaa.com:

ಫ್ರಾನ್ಸ್‌ನ ಪ್ಯಾರಿಸ್‌ ನಗರದಲ್ಲಿ ಯೋಗ ಗುರು ಅಂತೇಳ್ಕೊಂಡು ಮಹಿಳೆಯರನ್ನ ವ್ಯಭಿಚಾರಕ್ಕೆ ನೂಕುತ್ತಿದ್ದ ವ್ಯಕ್ತಿಯೊಬ್ಬ ಅರೆಸ್ಟ್‌ ಆಗಿದ್ದಾನೆ. 71 ವರ್ಷದ ಗ್ರೆಗೊರಿಯನ್‌ ಬಿವೊಲಾರು ಅನ್ನೋ ಈತನ ಮೇಲೆ ಅತ್ಯಾಚಾರ, ಶೋಷಣೆ, ಕಿಡ್ನಾಪ್‌ ಹಾಗೂ ಮಾನವ ಕಳ್ಳಸಾಗಣೆ ಕೇಸ್‌ಗಳಿದ್ವು. ಈತ Spiritual Integration into the Absolute ಅಂದ್ರೆ (ಸಂಪೂರ್ಣವಾದ ಆಧ್ಯಾತ್ಮಿಕ ಏಕೀಕರಣ) ಅಥ್ವಾ MISA ಯೋಗ ಅನ್ನೋ ಹೆಸರಿಟ್ಕೊಂಡು ಶಾಲೆಯೊಂದನ್ನ ನಡೆಸ್ತಿದ್ದ ಅಂತ ಗೊತ್ತಾಗಿದೆ. ಅಲ್ಲದೆ ಈತ ಲೈಂಗಿಕತೆಯನ್ನ ದೇವರೇ ಅಪ್ರೂವ್‌ ಮಾಡಿದ್ದಾನೆ ಅಂತೆಲ್ಲಾ ಹೇಳಿ ಮಹಿಳೆಯರ ತಲೆ ಕೆಡಿಸಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡ್ತಿದ್ದ ಎನ್ನಲಾಗಿದೆ. ಈತನನ್ನ ಬಂಧಿಸೋ ವೇಳೆ ಪೊಲೀಸರು 50 ಕ್ಕೂ ಹೆಚ್ಚು ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply