ನ್ಯಾಯಾಧೀಶೆಗೇ ಲೈಂಗಿಕ ಕಿರುಕುಳ! CJIಗೆ ಪತ್ರ!

masthmagaa.com:

ಉತ್ತರಪ್ರದೇಶದ ನ್ಯಾಯಾಧೀಶೆಯೊಬ್ರು ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಅಂತ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಬರೆದಿರೋ ಪತ್ರ ವೈರಲ್‌ ಆಗಿದೆ. ಎರಡು ಪುಟಗಳ ಈ ಪತ್ರದಲ್ಲಿ ಯುವ ನ್ಯಾಯಾಧೀಶೆ ತಮಗಾದ ಕಹಿ ಅನುಭವಗಳ ಬಗ್ಗೆ ಬರೆದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ನನಗೆ ಆತ್ಮಹತ್ಯೆ ಮಾಡಿಕೊಳ್ಳೋಕೆ ಅನುಮತಿ ಕೊಡಿ ಅಂತ ಕೇಳಿರೋ ಧಾರುಣ ಪ್ರಕರಣ ಇದಾಗಿದೆ. “ನಾನು ಜನರಿಗೆ ನ್ಯಾಯ ಕೊಡೋಕೆ ಅಂತ ಈ ಸೇವೆಗೆ ಬಂದೆ. ಆದ್ರೆ ನಾನೇ ನ್ಯಾಯಕ್ಕಾಗಿ ಬೇಡೋ ಸ್ಥಿತಿಗೆ ಬಂದಿದ್ದೇನೆ. ಓಪನ್‌ ಕೋರ್ಟ್‌ನ ವೇದಿಕೆಯಲ್ಲಿ ನನಗೆ ಅವಮಾನ ಮಾಡಿದ್ದಾರೆ. ಮಿತಿಮೀರಿದ ಲೈಂಗಿಕ ಕಿರುಕುಳ ನೀಡಿದ್ದಾರೆ. ರಾತ್ರಿ ವೇಳೆ ಸೀನಿಯರ್‌ ಅಧಿಕಾರಿಯನ್ನು ಭೇಟಿ ಮಾಡಿ ಅಂತ ನನ್ನನ್ನು ಕೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಅಂತ ಕೇಳಿದಾಗ ನನಗೆ ನ್ಯಾಯ ಸಿಗಲಿಲ್ಲ. ನ್ಯಾಯಾಧೀಶೆಯಾದ ನನಗೇ ನ್ಯಾಯ ಪಡೆಯೋಕೆ ಆಗ್ಲಿಲ್ಲ. ಇನ್ನು ಸಾಮಾನ್ಯ ಜನರ ಗತಿಯೇನು? ನನಗೆ ಬದುಕೋಕೆ ಇಷ್ಟ ಇಲ್ಲ. ಸಾಯೋಕೆ ಅನುಮತಿ ಕೊಡಿ” ಅಂತ ಪತ್ರದಲ್ಲಿ ಹೇಳಿದ್ದಾರೆ. ಅಂದ್ಹಾಗೆ ಅಲಹಾಬಾದ್‌ ಹೈ ಕೋರ್ಟ್‌ನ ಆಂತರಿಕ ದೂರುಗಳ ಸಮಿತಿ ಈ ಪ್ರಕರಣ ದಾಖಲಿಸಿಕೊಂಡಿದೆ ಅಂತ ಸುಪ್ರೀಂ ಕೋರ್ಟ್‌ ಸಂತ್ರಸ್ತ ನ್ಯಾಯಾಧೀಶರ ಮನವಿಯನ್ನ ನಿರಾಕರಿಸಿತ್ತು. ಆದ್ರೆ ಈಗ ನೇರವಾಗಿ CJI ಚಂದ್ರಚೂಡ್‌ಗೆ ಇವರು ಪತ್ರ ಬರೆದಿದ್ದಾರೆ. CJI ಈ ಪ್ರಕರಣದ ಬಗ್ಗೆ ವರದಿ ನೀಡಿವಂತೆ ಅಲಹಾಬಾದ್‌ ಹೈ ಕೋರ್ಟ್‌ಗೆ ಸೂಚನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply