ಕತಾರ್‌ನಲ್ಲಿ ಬಂಧಿಯಾಗಿದ್ದ ಸೈನಿಕರನ್ನ ಶಾರುಖ್ ಖಾನ್‌ ಬಿಡಿಸಿದ್ರ?

masthmagaa.com:

ಇತ್ತೀಚೆಗಷ್ಟೆ ಕತಾರ್‌ನಲ್ಲಿ ಬಂಧಿಯಾಗಿದ್ದ ಭಾರತದ ನೇವಿ ಅಧಿಕಾರಿಗಳು ರಿಲೀಸ್‌ ಆಗಿದ್ರು. ಈಗ ಈ ಕೇಸ್‌ನಲ್ಲಿ ಶಾರುಖ್‌ ಖಾನ್‌ ಭಾರತ ಸರ್ಕಾರಕ್ಕೆ ಹೆಲ್ಪ್ ಮಾಡಿದ್ದಾರೆ ಅನ್ನೋ ಶಾಕಿಂಗ್‌ ಹೇಳಿಕೆಯನ್ನ, ಬಿಜೆಪಿ ಹಿರಿಯ ನಾಯಕ ಸುಬ್ರಮಣ್ಯಂ ಸ್ವಾಮಿ ಕೊಟ್ಟಿದ್ದಾರೆ. ಯಾಕಂದ್ರೆ ಕತಾರ್‌ ಪಿಎಂ ಮೊಹಮದ್‌ ಬಿನ್‌ ಅಲ್‌ ತನಿ, AFC ಫುಟ್‌ಬಾಲ್‌ ಫೈನಲ್‌ ಪಂದ್ಯಕ್ಕೆ ಶಾರುಖ್‌ ಖಾನ್‌ರನ್ನ ವಿಶೇಷ ಅಥಿತಿಯಾಗಿ ಆಹ್ವಾನಿಸಿದ್ರು. ಇದೇ ಟೈಮಲ್ಲಿ UAE, ಕತಾರ್‌ ಪ್ರವಾಸಕ್ಕೆ ಹೊರಟಿರೋ ಪಿಎಂ ಮೋದಿ, ಪ್ರವಾಸದ ವಿಚಾರವನ್ನ ಪೋಸ್ಟ್‌ ಮಾಡಿದ್ರು. ಇದಕ್ಕೆ ರಿಪ್ಲೈ ಮಾಡಿರೋ ಸುಬ್ರಮಣ್ಯಂ ಸ್ವಾಮಿ, ಮೋದಿಯವ್ರು ತಮ್ಮ ಜೊತೆಗೆ ಕತಾರ್‌ಗೆ ಶಾರುಕ್‌ ಖಾನ್‌ರನ್ನ ಕರ್ಕೊಂಡ್‌ ಹೋಗ್ಬೇಕು. ಇಬ್ರು ಒಟ್ಟಾಗಿ ಹೋಗ್ಬೇಕು. ಯಾಕಂದ್ರೆ ವಿದೇಶಾಂಗ ಇಲಾಖೆ, ಸೆಕ್ಯುರಿಟಿ ಏಜೆನ್ಸಿ ಕತಾರ್‌ ಜೊತೆ‌ ಸೈನಿಕರ ವಿಚಾರವಾಗಿ ನೆಗೊಷಿಯೇಟ್ ಮಾಡೋದ್ರಲ್ಲಿ ಫೇಲಾಗಿತ್ತು. ಆಗ ಅವ್ರನ್ನ ಬಿಡಿಸೋಕೆ ಪಿಎಂ ಮೋದಿ ಶಾರುಕ್ ಖಾನ್‌ ಸಹಾಯ ಪಡೆದಿದ್ರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಅವ್ರ ಬಳಿ ಮನವಿ ಮಾಡಿದ್ರು ಅಂತ ಕಮೆಂಟ್‌ ಮಾಡಿದ್ರು. ಆದ್ರೆ ಈ ಬಗ್ಗೆ ಶಾರುಖ್‌ ಖಾನ್ ಕಛೇರಿ ಕ್ಲಾರಿಟಿ ಕೊಟ್ಟಿದೆ. ಇದ್ರಲ್ಲಿ ಶಾರುಖ್‌ ಖಾನ್‌ರ ಪಾತ್ರ ಏನೂ ಇಲ್ಲ. ಇವೆಲ್ಲಾ ಆಧಾರ ರಹಿತ ಹೇಳಿಕೆಗಳು. ಇಂತಹ ರಾಜತಾಂತ್ರಿಕ ವಿಚಾರಗಳಲ್ಲಿ ಕೇವಲ ಸರ್ಕಾರ ಮಾತ್ರ ತಲೆಹಾಕೋಕೆ ಆಗುತ್ತೆʼ ಅಂದಿದೆ.

-masthmagaa.com

Contact Us for Advertisement

Leave a Reply