ಶಕ್ತಿ ಯೋಜನೆ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕಾನೂನು ವಿದ್ಯಾರ್ಥಿಗಳು!

masthmagaa.com:

ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್​ ಪ್ರಯಾಣ ‘ಶಕ್ತಿ ಯೋಜನೆ’ ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿದೆ. ಶಕ್ತಿ ಯೋಜನೆ ಜಾರಿ ಆದಾಗಿನಿಂದ ಇಲ್ಲಿಯವರೆಗೂ ಅನುಕೂಲಗಳ ಜೊತೆಗೆ ಅನಾನುಕೂಲತೆಗಳು ಉಂಟಾಗಿವೆ. ಈ ಯೋಜನೆಯಿಂದ‌ ಬಸ್​​ಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಸಾರಿಗೆ ಬಸ್​​ಗಳಲ್ಲಿ ಸೀಟಿಗಾಗಿ ಹೊಡೆದಾಟ ನಡೆಯುತ್ತಿವೆ ಅಂತ ಅರ್ಜಿಯಲ್ಲಿ ತಿಳಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಮಕ್ಕಳು ಬಸ್ ಹತ್ತಲಾಗುತ್ತಿಲ್ಲ. ಹೀಗಾಗಿ ಶಾಲಾ ಕಾಲೇಜು ಪರೀಕ್ಷೆಗಳಿಗೆ ಸರಿಯಾದ ವೇಳೆಗೆ ವಿದ್ಯಾರ್ಥಿಗಳು ತಲುಪೋಕೆ ಆಗ್ತಿಲ್ಲ. ಕೆಲವೆಡೆ ಬಸ್ ಹತ್ತಲಾಗದೇ ವಿದ್ಯಾರ್ಥಿಗಳು ಬಿದ್ದ ಘಟನೆಗಳು ಕೂಡ ವರದಿಯಾಗಿವೆ. ಒಂದೇ ವಾರದಲ್ಲಿ ತೆರಿಗೆದಾರರ 100 ಕೋಟಿ ರೂಪಾಯಿ ಹಣ ಶಕ್ತಿ ಯೋಜನೆಗೆ ಬಳಕೆಯಾಗಿದೆ. ಅಂದರೆ ವರ್ಷಕ್ಕೆ 3,200 ರಿಂದ 3,400 ಕೋಟಿ ರೂಪಾಯಿ ನಷ್ಟವಾಗಲಿದೆ. ಟಿಕೆಟ್ ಖರೀದಿಸಿದವರಿಗೆ ಶೇ.50ರಷ್ಟು ಸೀಟ್ ಮೀಸಲಿಡಬೇಕು ಅಂತ ಮನವಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply