ಶಕ್ತಿ ಯೋಜನೆ: ಮಹಿಳೆಯರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ

masthmagaa.com:

ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭಾರಿ ರೆಸ್ಪಾನ್ಸ್‌ ಬರ್ತಾಯಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದಾಗಿ ದೇವಾಲಯಕ್ಕೆ ಬರೋರ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ಫುಲ್ ರಶ್ ಕಂಡುಬರುತ್ತಿದೆ. ಇದ್ರಿಂದಾಗಿ ರಾಜ್ಯದ ಪ್ರವಾಸೋದ್ಯಮದಲ್ಲಿ ಉತ್ತೇಜನ ಕಂಡು ಬಂದಿದೆ ಅಂತ ಅಭಿಪ್ರಾಯ ಕೇಳಿ ಬರ್ತಿದೆ. ಈ ವಾರಾಂತ್ಯದಲ್ಲಿ ಲಕ್ಷಗಟ್ಟಲೆ ಮಹಿಳೆಯರು ಹಿಂದೂ ಯಾತ್ರಾ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಇಂತಹ ಮಾನ್ಸೂನ್ ಸಮಯದಲ್ಲಿ, ಮಳೆಯ ನಡುವೆ ಹಿಂದೂ ಯಾತ್ರಾ ಕೇಂದ್ರಗಳು ಹೆಚ್ಚಾಗಿ ರಶ್ ಇರಲ್ಲ. ಆದ್ರೆ ಸ್ತ್ರೀ ಶಕ್ತಿ ಗುಂಪುಗಳು ಮಹಿಳೆಯರಿಗಾಗಿ ತೀರ್ಥಯಾತ್ರೆಗಳನ್ನು ಆಯೋಜಿಸುತ್ತಿದ್ದು ಬಸ್‌ಗಳೆಲ್ಲಾ ರಶ್‌ ಆಗ್ತಿವೆ. ಸಾರಿಗೆ ಇಲಾಖೆಯ ಅಧಿಕೃತ ಹೇಳಿಕೆಯ ಪ್ರಕಾರ, ಜೂನ್ 11-23ರ ನಡುವೆ 6.57 ಕೋಟಿಗೂ ಹೆಚ್ಚು ಮಹಿಳೆಯರು ಉಚಿತ ಟಿಕೆಟ್‌ ಯೋಜನೆಯನ್ನ ಬಳಸಿಕೊಂಡು ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ. ಅಂದ್ರೆ ಅಷ್ಟು ಕೋಟಿ ಮಹಿಳೆಯರು ಅಂದ್ರೆ ಅಷ್ಟು ಜನ ತಿರುಗಾಡಿದ್ದಾರೆ ಅಂತ. ಒಬ್ರು ಎರಡು ಸಲ ಮೂರ ಸಲ ತಿರುಗಾಡಿದ್ರೂ ಇದು ಕೌಂಟ್‌ ಆಗುತ್ತೆ. ಇತ್ತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳನ್ನ ಬಿಡುವಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸೂಚನೆ ನೀಡಿದ್ದಾರೆ. ಇನ್ನು ವಿಕೇಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಹದೇಶ್ವರ ಬೆಟ್ಟಕ್ಕೆ ಹೆಚ್ಚು ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಇನ್ನೊಂದ್‌ ಕಡೆ ಹೆಚ್ಚಿನ ಮಹಿಳಾ ಪ್ರಯಾಣಿಕರಿಂದ ಬಸ್‌ಗಳು ರಶ್‌ ಆಗಿರೋದನ್ನೇ ಅಡ್ವಾಂಟೇಜ್‌ ಆಗಿ ತಗೊಂಡಿರೋ ಕಳ್ಳರು ತಮ್ಮ ಕೈಚಳಕ ತೋರಿಸಲು ಶುರು ಮಾಡಿದ್ದಾರೆ. ಮಹಿಳೆಯೊಬ್ಬರ 50 ಗ್ರಾಂ ಚಿನ್ನದ ಆಭರಣಗಳನ್ನು ದೋಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜೊತೆಗೆ ಪರ್ಸ್‌ನಲ್ಲಿದ್ದ ಆಭರಣಗಳ ಜೊತೆಗೆ ಆಕೆಯ ಪತಿಯ ಎಟಿಎಂ ಕಾರ್ಡ್‌, ಬಿಎಸ್‌ಎಫ್‌ ಮಿಲಿಟರಿ ಕಾರ್ಡ್‌ ಸೇರಿದಂತೆ ಸುಮಾರು 2.10 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಅಂತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

-masthmagaa.com

Contact Us for Advertisement

Leave a Reply