ಪಾಕ್‌ಗೆ ಹೊಸ ಸರ್ಕಾರ! ಇವರೇ ಹೊಸ ಪ್ರಧಾನಿ, ಅಧ್ಯಕ್ಷ!

masthmagaa.com:

ಪಾಕ್‌ ಚುನಾವಣೆ ಒಳ್ಳೆ ಟಿವಿನಲ್ಲಿ ಬರೋ ಸೀರಿಯಲ್‌ ತರ… ಸಾಕಷ್ಟು ಟ್ವಿಸ್ಟ್‌ & ಟರ್ನ್ಸ್‌ ಕೊಡ್ತಾ ಒಂದು ದೃಢ ನಿರ್ಧಾರಕ್ಕೆ ಬರೋಕೆ ಬಹಳ ಟೈಮ್‌ ತಗೊಂಡಿದೆ. ಇದೀಗ ಕೊನೆಗೂ ಪಾಕ್‌ ಪಿಎಂ ಯಾರಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಕೂಡ ಸಿಕ್ಬಿಟ್ಟಿದೆ. ಆರ್ಥಿಕ ಬಿಕ್ಕಟ್ಟಿನಲ್ಲಿರೋ ಪಾಕ್‌ ಸರ್ಕಾರವನ್ನ ಇದೀಗ ಮಾಜಿ ಪ್ರಧಾನಿ ನವಾಜ್‌ ಷರೀಫ್‌ರ ತಮ್ಮ, ಮಾಜಿ ಪ್ರಧಾನಿ ಶೆಹಬಾಜ್‌ ಷರೀಫ್‌ ಮುನ್ನೆಡಸಲಿದ್ದಾರೆ. ಅಷ್ಟೇ ಅಲ್ದೇ ನವಾಜ್‌ ಶರೀಫ್‌ರ ಮಗಳಾದ ಮರ್ಯಮ್‌ ನವಾಜ್‌ ಪಾಕ್‌ನ ಪಂಜಾಬ್‌ ಪ್ರಾಂತ್ಯದ ನೂತನ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಹೀಗಂತ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಕನ್ಫರ್ಮ್‌ ಮಾಡಲಾಗಿದೆ. ಇನ್ನು ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಜೊತೆ ಮೈತ್ರಿ ಮಾಡ್ಕೊಂಡ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಪ್ರಮುಖ ನಾಯಕ ಆಸಿಫ್‌ ಅಲಿ ಜರ್ದಾರಿ ಇದೀಗ ಪಾಕ್‌ನ ನೂತನ ಅಧ್ಯಕ್ಷರಾಗಲಿದ್ದಾರೆ. ಹೀಗಂತ ಅಲ್ಲಿನ ಮೀಡಿಯಾಗಳು ರಿಪೋರ್ಟ್‌ ಮಾಡ್ತಿವೆ. ಅಂದ್ಹಾಗೆ ಇವ್ರು ಈ ಬಾರಿ ಪಾಕ್‌ ಅಧ್ಯಕ್ಷರಾದ್ರೆ, ಇದು ಇವ್ರ ಎರಡನೇ ಅಧ್ಯಕ್ಷೀಯ ಅವಧಿಯಾಗಲಿದೆ. ಈ ಹಿಂದೆ 2008-13ರ ಅವಧಿಯಲ್ಲಿ PPP ಅಧಿಕಾರದಲ್ಲಿದ್ದಾಗ ಆಸಿಫ್‌ ಅಲಿ ಜರ್ದಾರಿ ಮೊದಲ ಬಾರಿಗೆ ಪಾಕ್‌ ಅಧ್ಯಕ್ಷರಾಗಿದ್ರು. ಇದೀಗ ಇವ್ರು ಮತ್ತೊಮ್ಮೆ ಅಧ್ಯಕ್ಷರಾಗೋ ಮಾಹಿತಿ ಪಾಕ್‌ ಮೂಲಗಳಿಂದ ಕೇಳಿ ಬರ್ತಿವೆ. ಆದ್ರೆ ಇದ್ರ ಬಗ್ಗೆ ಅಫಿಶಿಯಲ್‌ ಕನ್ಫರ್ಮೇಷನ್‌ ಇನ್ನೇನು ಸಿಗಬೇಕು ಅಷ್ಟೇ. ಒಟ್ಟಾರೆಯಾಗೆ ಪಾಕ್‌ ಜನ ಬೆಂಬಲ ಜೈಲುವಾಸದಲ್ಲಿರೋ ಇಮ್ರಾನ್‌ ಖಾನ್‌ಗೆ ಇದ್ರೂ ಕೂಡ, ಪಾಕ್‌ ಸೇನೆಯ ಇಚ್ಛೆ ಇಲ್ಲಿ ಈಡೇರಿದೆ. ಪಾಕಿಸ್ತಾನ್‌ ಮುಸ್ಲಿಂ ಲೀಗ್‌, PPP ಮೈತ್ರಿಯೊಂದಿಗೆ ಸರ್ಕಾರ ರಚಿಸೋಕೆ ರೆಡಿಯಾಗಿದೆ. ಇನ್ನು ಪಾಕ್‌ ಚುನಾವಣೆಯಲ್ಲಿ ಈ ರೀತಿಯ ಸಡನ್‌ ಬೆಳವಣಿಗೆ ಬಗ್ಗೆ ವಿಪಕ್ಷ ಇಮ್ರಾನ್‌ ಖಾನ್‌ರ PTI ರಿಯಾಕ್ಟ್‌ ಮಾಡಿದೆ. ʻರಾತ್ರೋರಾತ್ರಿ ಜನಾದೇಶವನ್ನ ಕದಿಯಲಾಗಿದೆ. ಜನರಿಂದ ಬೆಂಬಲ ಸಿಗದಿದ್ರೂ, ಕಳ್ಳರ ಗುಂಪಿಗೆ ಸರ್ಕಾರ ರಚಿಸೋಕೆ ಬಿಡಲಾಗಿದೆ. ಪಾಕಿಸ್ತಾನವನ್ನ ಇನ್ನಷ್ಟು ಕೆಟ್ಟ ಪರಿಸ್ಥಿತಿಗೆ ನೂಕೋ ಕೆಲಸ ಮಾಡಲಾಗ್ತಿದೆʼ ಅಂತ PTIನ ಕೇಂದ್ರ ಮಾಹಿತಿ ಕಾರ್ಯದರ್ಶಿ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply