ಸಾಲ ಮರುಪಾವತಿಗಾಗಿ IMF ನತ್ತ ಪಾಕಿಸ್ತಾನದ ಅಧಿಕಾರಿಗಳು!

masthmagaa.com:

ಪಾಕಿಸ್ತಾನದಲ್ಲಿ ಮತ್ತೊಮ್ಮೆ ಪ್ರಧಾನಿಯಾಗ್ತಿದ್ದಂತೆ ಶಹಬಾಜ್‌ ಷರೀಫ್‌ ಪಾಕ್‌ನ ಆರ್ಥಿಕ ಪರಿಸ್ಥಿತಿ ಸರಿ ಮಾಡೋ ಬಗ್ಗೆ ಮಾತಾಡಿದ್ದಾರೆ. ಅಲ್ದೆ ಪಾಕ್‌ನ ಸಾಲವನ್ನ ವಿಸ್ತರಣೆ ಮಾಡುವ ಪ್ರಕ್ರಿಯೆ ಕುರಿತು ಇಂಟರ್‌ನ್ಯಾಷನಲ್‌ ಮಾನಿಟರ್‌ ಫಂಡ್‌ ಬಳಿ ತಕ್ಷಣವೇ ಮಾತುಕತೆ ನಡೆಸುವಂತೆ ತನ್ನ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಪಾಕ್‌ ಇತ್ತೀಚಿಗೆ IMF ಬಳಿ 3 ಬಿಲಿಯನ್‌ ಡಾಲರ್ ಅಂದ್ರೆ 24,900 ಕೋಟಿ ರೂಪಾಯಿ ಸಾಲ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರ 2ನೇ ಕಂತಿನ ಭಾಗವಾಗಿ 700 ಮಿಲಿಯನ್‌ ಡಾಲರ್‌ ಅಂದ್ರೆ 5810 ಕೋಟಿ ರೂಪಾಯಿ ಸಾಲವನ್ನ ಪಡೆದಿತ್ತು. ಈ ಹಣ ಬಳಸಿಕೊಂಡೇ ಚುನಾವಣೆ ಮಾಡ್ಕೊಂಡಿತ್ತು. ಈಗ ಒಪ್ಪಂದದ ಪ್ರಕಾರ ಇನ್ನುಳಿದ ಹಣವನ್ನ ತಗೋಳೋಕೆ ಪಾಕ್‌ನ ಅಧಿಕಾರಿಗಳಿಗೆ ಹೊಸ ಪ್ರಧಾನಿ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply