ಬೆಂಗಳೂರಿನಲ್ಲಿ ಕುಸಿದು ಬಿದ್ದ ನರ್ಸರಿ ಶಾಲೆ ಬಿಲ್ಡಿಂಗ್‌! ಏನಾಯ್ತು?

masthmagaa.com:

ನರ್ಸರಿ ಶಾಲೆಯ ಬಿಲ್ಡಿಂಗ್‌ ಕುಸಿದು ಬಿದ್ದಿರೋ ಘಟನೆ ಇಂದು ಬೆಳಗಿನ ಜಾವ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ. ಶಿವಾಜಿನಗರದ ಕುಕ್ಸ್ ರೋಡ್‌ನ ಬಿ ಕ್ರಾಸ್‌ನಲ್ಲಿರೋ ಬಿಬಿಎಂಪಿಗೆ ಸೇರಿದ ನರ್ಸರಿ ಶಾಲೆ ಕುಸಿದು ಬಿದ್ದಿದೆ. ಇದ್ರಿಂದ ಈ ಬಿಲ್ಡಿಂಗ್‌ ಸುತ್ತಾ ಪಾರ್ಕ್‌ ಮಾಡಲಾಗಿದ್ದ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಆದ್ರೆ ಮಕ್ಕಳು ಶಾಲೆಯಲ್ಲಿ ಇರದ ಟೈಮ್‌ನಲ್ಲಿ ಘಟನೆ ನಡೆದಿದ್ದು, ಯಾವ್ದೇ ರೀತಿ ಪ್ರಾಣ ಹಾನಿಯಾಗಿಲ್ಲ. ದೊಡ್ಡ ಅನಾಹುತ ಆಗೋದು ತಪ್ಪಿಹೋಗಿದೆ. ಇದೀಗ ಸ್ಥಳಕ್ಕೆ ಜೆಸಿಬಿ ಬಂದು, ಬಿಲ್ಡಿಂಗ್‌ನ ಅವಶೇಷಗಳನ್ನ ತೆರವು ಮಾಡೋ ಕಾರ್ಯ ನಡೆದಿದೆ.

-masthmagaa.com

Contact Us for Advertisement

Leave a Reply