ಶಿವರಾಜ್‌ಕುಮಾರ್‌ ಚಿತ್ರ ಬ್ಯಾನ್‌ ಮಾಡುವಂತೆ ಬಿಜೆಪಿ ಯುವ ಮೋರ್ಚಾ ದೂರು!

masthmagaa.com:

ನಟ ಶಿವರಾಜ್‌ಕುಮಾರ್‌ ಅವ್ರ ಚಿತ್ರ, ಜಾಹಿರಾತುಗಳನ್ನ ನಿಷೇಧ ಮಾಡುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಪರವಾಗಿ ಪ್ರಚಾರ ಮಾಡ್ತಿದ್ದಾರೆ. ಇದೇ ಟೈಮಲ್ಲಿ ಅವರ ಸಿನೆಮಾ ರಿಲೀಸ್‌ ಆಗಿರೋದ್ರಿಂದ ರಾಜ್ಯಾದ್ಯಂತ ಅವರ ಚಿತ್ರದ ಪೋಸ್ಟರ್‌, ಜಾಹಿರಾತುಗಳ ಫ್ಲೆಕ್ಸ್‌ಗಳನ್ನ ಹಾಕಲಾಗಿದೆ. ಸದ್ಯ ನೀತಿ ಸಂಹಿತೆ ಜಾರಿ ಇರೋದ್ರಿಂದ, ಅವರ ಚಿತ್ರ, ಪೋಸ್ಟರ್‌ ಹಾಗೂ ಜಾಹಿರಾತುಗಳನ್ನ ಬ್ಯಾನ್ ಮಾಡ್ಬೇಕು ಅಂತ, ಬಿಜೆಪಿ ಯುವ ಮೋರ್ಚಾ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಅಲ್ಲದೆ ಚುನಾವಣೆ ಟೈಮಲ್ಲಿ ಅನಗತ್ಯ ಲಾಭ ಅಥ್ವಾ ಪ್ರಭಾವ ತಡೆಗಟ್ಟೋಕೆ ಆಯೋಗ ಕ್ರಮ ತಗೊಳ್ಬೇಕು ಅಂತ ಪತ್ರ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply