ಉಡುಪಿಯಲ್ಲಿ ಮದುವೆ ಆದ ಶುಭ ಪೂಂಜ!

masthmagaa.com:

ನಟಿ ಶುಭಾ ಪೂಂಜ ತಮ್ಮ ಬಹುಕಾಲದ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ಬುಧವಾರ ಉಡುಪಿ ಹತ್ತಿರದ ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾಗಿದ್ದಾರೆ.

ಈ ವಿಚಾರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಶುಭಾ ಪೂಂಜ, ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು, ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಕುಟುಂಬ ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು ಎಂದು ತಿಳಿಸಿದ್ದಾರೆ.

ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ಹೇಳುವ ಮೂಲಕ ಶುಭಾ ಪುಂಜ ತಮ್ಮ ವಿವಾಹ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Contact Us for Advertisement

Leave a Reply