ಬೆಂಗಳೂರಿನಲ್ಲಿ ಚೀನಾ ಪರ ಕಾರ್ಯಕ್ರಮ! ಸಿದ್ದರಾಮಯ್ಯ ಮುಖ್ಯ ಅತಿಥಿ ಅಂತ ಉಲ್ಲೇಖ!

masthmagaa.com:

ಭಾರತ ಚೀನಾ ಸಂಬಂಧ ಹಳ್ಳ ಹಿಡಿತಿರೋ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಚೀನಾ ಪರವಾದ ಕಾರ್ಯಕ್ರಮವೊಂದು ಆಯೋಜನೆ ಆಗ್ತಾಯಿದೆ. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಂದ್ರೆ ತೈವಾನ್‌ ವಿಚಾರದಲ್ಲಿ ಅಮೆರಿಕದ ಹಸ್ತಕ್ಷೇಪ ಖಂಡಿಸಿ ಭಾರತ – ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಇದರಲ್ಲಿ ಚೈನೀಸ್‌ ಛಾಯಾಚಿತ್ರಗಳನ್ನ ಪ್ರದರ್ಶನ ಮಾಡೋದು ಅಮೆರಿಕವನ್ನ ಖಂಡಿಸೋದು ಎಲ್ಲ ಇರುತ್ತೆ ಅಂತ ಹೇಳಲಾಗಿದೆ. ಅಲ್ದೇ ಇದ್ರಲ್ಲಿ ಭಾರತದಲ್ಲಿರೋ ಚೀನಾದ ರಾಯಭಾರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಕೂಡ ಭಾಗವಹಿಸ್ತಾರೆ ಅಂತ ಹೇಳಲಾಗಿದೆ. ಆದ್ರೆ ಇದೇ ವಿಚಾರ ಈಗ ರಾಜಕೀಯ ಪಕ್ಷಗಳ ವಾಗ್ವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮಕ್ಕೆ ನೀಡಿರೋ ಆಹ್ವಾನ ಪತ್ರದಲ್ಲಿ ಚೀಫ್‌ ಗೆಸ್ಟ್‌ ಆಗಿ ಸಿದ್ದರಾಮಯ್ಯರ ಹೆಸರಿದೆ ಅಲ್ದೇ ಇನ್ನುಳಿದಂತೆ ಹಲವು ಕಾಂಗ್ರೆಸ್‌ ನಾಯಕರನ್ನ ಹೆಸರಿಸಲಾಗಿದೆ. ಇದನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿದ್ದು ಕಾಂಗ್ರೆಸ್‌ ವಿರುದ್ದ ಹರಿಹಾಯ್ದಿದೆ. ಟ್ವೀಟ್‌ ಮಾಡಿರೋ ರಾಜ್ಯ ಬಿಜೆಪಿ ಘಟಕ ಚೀನಾ ಜೊತೆಗಿನ ಗಡಿ ಸಮಸ್ಯೆ ಪ್ರಸ್ತಾಪಿಸುವ ರಾಹುಲ್‌ ಗಾಂಧಿ ಅವರಿಗೆ ತಮ್ಮದೇ ಪಕ್ಷದ ನಾಯಕರು “India-China Friendship Association” ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಕಾಣುತ್ತಿಲ್ಲವೇ? ಕಾಂಗ್ರೆಸ್‌ಗೂ, ಚೀನಾ ದೇಶಕ್ಕೂ ಇರುವ ಸಂಬಂಧವೇನು? ಅಂತ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರ ಕೊಟ್ಟಿರೋ ಮಾಜಿ ಸಿಎಂ ಸಿದ್ದರಾಮಯ್ಯ ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ‌ ಹೆಸರು ಕಂಡು ಆಶ್ಚರ್ಯವಾಗಿದೆ. ಸೈದ್ದಾಂತಿಕವಾಗಿ ನನ್ನ‌ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ದವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply