ಬಾಲಿವುಡ್ ನಟ ಸಲ್ಮಾನ್‌ ಖಾನ್‌ ನಮ್ಮ ಕಿಲ್‌ ಲಿಸ್ಟ್‌ನಲ್ಲಿದ್ದಾನೆ: ಗೋಲ್ಡಿ ಬ್ರಾರ್‌

masthmagaa.com:

ಬಾಲಿವುಡ್ ನಟ ಸಲ್ಮಾನ್‌ ಖಾನ್‌ ನಮ್ಮ ಕಿಲ್‌ ಲಿಸ್ಟ್‌ನಲ್ಲಿದ್ದಾನೆ ಅಂತ ಕೆನಡದಲ್ಲಿ ತಲೆಮರೆಸಿಕೊಂಡಿರುವ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಸಂದರ್ಶನ ಒಂದ್ರಲ್ಲಿ ಹೇಳಿದ್ದಾನೆ. ಅಂದ್ಹಾಗೆ ಕಳೆದ ವರ್ಷ ಪಂಜಾಬ್‌ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯ ಮಾಸ್ಟರ್‌ಮೈಂಡ್‌ ಈ ಗೋಲ್ಡಿ ಬ್ರಾರ್‌ ಅಂತ ಆರೋಪಿಸಲಾಗಿತ್ತು. ಇದೀಗ ಸಲ್ಮಾನ್‌ ಖಾನ್‌ನ್ನ ಖಂಡಿತವಾಗಿ ಕೊಲ್ಲುತ್ತೇವೆ. ಸಲ್ಮಾನ್‌ ಕ್ಷಮೆ ಕೇಳಲ್ಲ ಅಂತ ಹೇಳಿರೋದಾಗಿ ಲಾರೆನ್ಸ್‌ ಬಿಷ್ಣೋಯ್‌ ಖಚಿತಪಡಿಸಿದ್ದಾನೆ. ಹಾಗಾಗಿ ಅವನನ್ನ ಕೊಲ್ಲುತ್ತೇವೆ ಅಂತ ಹೇಳಿದ್ದಾನೆ. ಅಲ್ದೇ ಇದು ಕೇವಲ ಸಲ್ಮಾನ್‌ ಖಾನ್‌ ಬಗ್ಗೆ ಅಲ್ಲ. ನಾವು ಜೀವಂತವಾಗಿರೋವರೆಗೂ ನಮ್ಮ ಶತ್ರುಗಳನ್ನ ಕೊಲ್ಲಲು ಪ್ರಯತ್ನ ಮಾಡ್ತೀವಿ. ಸಲ್ಮಾನ್‌ ನಮ್ಮ ಟಾರ್ಗೆಟ್‌. ನಾವು ಪ್ರಯತ್ನ ಪಡ್ತೀದೀವಿ. ನಾವು ಯಶಸ್ವಿಯಾದಾಗ ನಿಮಗೆ ಗೊತ್ತಾಗುತ್ತೆ ಎಂದಿದ್ದಾನೆ.

-masthmagaa.com

Contact Us for Advertisement

Leave a Reply