ವಿನಾಶ ಎದುರಿಸಲು ʻಡೂಮ್ಸ್‌ಡೇ ವಿಮಾನʼ ತಯಾರಿಗೆ ಮುಂದಾದ US!

masthmagaa.com:

ವಿಶ್ವದಲ್ಲಿ ಯುದ್ಧ ಪರಿಸ್ಥಿತಿಗಳು ಹೆಚ್ಚಾಗ್ತಿರೋ ನಡುವೆಯೇ ಅಮೆರಿಕ ಈಗ ಹೊಸ ʻಡೂಮ್ಸ್‌ಡೇ ವಿಮಾನʼಕ್ಕೆ ಆರ್ಡರ್‌ ಮಾಡಿದೆ. ನ್ಯೂಕ್ಲಿಯರ್‌ ವಾರ್‌ ಅಥವಾ ಮಹಾಯುದ್ಧಗಳಂತಹ ವಿನಾಶಕಾರಿ ಪರಿಸ್ಥಿತಿಯಲ್ಲಿ ನೆಲದ ಮೇಲಿರೋ ಕಮಾಂಡಿಂಗ್‌ ಸೆಂಟರ್‌ಗಳೆಲ್ಲ ನಾಶವಾಗ್ಬಹುದು. ಇಂತಹ ಸಂದರ್ಭದಲ್ಲಿ ಸರ್ವೈವ್‌ ಆಗಿ, ನಿರಂತರವಾಗಿ ಸೂಚನೆ ಕೊಡ್ತಾ ಯುದ್ಧದ ಮೇಲೆ ಕಂಟ್ರೋಲ್‌ ಸಾಧಿಸೋಕೆ ವಿಮಾನದಲ್ಲೇ ಕಮಾಂಡಿಂಗ್‌ ಸೆಂಟರ್‌ನ್ನ ಸ್ಥಾಪಿಸಲಾಗಿರುತ್ತೆ. ಇಂತಹ ವಿಮಾನವನ್ನ ಡೂಮ್ಸ್‌ ಡೇ ವಿಮಾನ ಅಥವಾ Survivable Airborne Operations Center (SAOC) ಅಂತ ಕರೀತಾರೆ. ವಿಶ್ವದಲ್ಲಿ ಇಷ್ಟೊಂದು ಆತಂಕದಲ್ಲಿ ಇಂತಹ ವಿಮಾನಗಳಿಟ್ಕೊಂಡಿರೋದು ಎರಡೇ ದೇಶ… ಒಂದು ಅಮೆರಿಕ ಮತ್ತೊಂದು ರಷ್ಯಾ… 70ರ ದಶಕದಿಂದ ಇಟ್ಕೊಂಡಿವೆ… ಸದ್ಯ ಅಮೆರಿಕ ಬಳಿ ಇದ್ದಕಾಗಿ E-4B ನೈಟ್‌ವಾಚ್‌ ಏರ್‌ಕ್ರಾಫ್ಟ್‌ ಅನ್ನೋ ಏರ್‌ಫೋರ್ಸ್‌ನ ವಿಮಾನ ಇತ್ತು. ಇದ್ರಲ್ಲಿ ಅಧ್ಯಕ್ಷರು, ಮಿಲಿಟರಿ ನಾಯಕರು ಸೇರಿದಂತೆ ಅಮೆರಿಕದ ಸರ್ಕಾರ ಕೆಲಸ ಮಾಡುವಂತೆ ಡಿಸೈನ್‌ ಮಾಡಲಾಗಿತ್ತು. ಆದ್ರೆ ಈಗ ನೈಟ್‌ವಾಚ್‌ನ ಅವಧಿ ಮುಗಿದಿರೋದ್ರಿಂದ ಹೊಸ ವಿಮಾನಕ್ಕೆ ಆರ್ಡರ್‌ ಮಾಡಲಾಗಿದೆ. ಈ ಕಾಂಟ್ರಾಕ್ಟ್‌ನ್ನ ಈಗ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಕಂಪನಿಯಾದ ಸಿಯೆರಾ ನೆವಾಡಾ ಕಾರ್ಪೋರೇಷನ್‌ಗೆ ಸಿಕ್ಕಿದೆ. ಬರೋಬ್ಬರಿ 13 ಬಿಲಿಯನ್‌ ಡಾಲರ್‌, 1 ಲಕ್ಷ ಕೋಟಿ ರುಪಾಯಿ ವೆಚ್ಚದಲ್ಲಿ ಈ ವಿಮಾನ ನಿರ್ಮಾಣ ಆಗಲಿದೆ. ಅಂದ್ರೆ ಕರ್ನಾಟಕದ ಬಜೆಟ್‌ನ ಮೂರನೇ ಒಂದು ಭಾಗದಷ್ಟು ದುಡ್ಡನ್ನ ಕೇವಲ ಒಂದು ವಿಮಾನಕ್ಕಾಗಿ ಅಮೆರಿಕ ಸುರೀತಿದೆ…. ಅದೂ ಯಾವತ್ತು ಯೂಸ್‌ ಮಾಡ್ತಾರೆ ಅಂತ ಯಾರಿಗೂ ಗೊತ್ತಿಲ್ಲ. ಕಳೆದ ಅರ್ಧ ಶತಮಾನದಲ್ಲಂತು ಯಾವತ್ತೂ ಬಳಸಿಲ್ಲ…

-masthmagaa.com

Contact Us for Advertisement

Leave a Reply