ಸೂರ್ಯನ ಗಾತ್ರ ನಾವಂದುಕೊಂಡಿದ್ದಕಿಂದ ಕಮ್ಮಿ ಇದೆ: ಶಾಕಿಂಗ್‌ ವರದಿ

masthmagaa.com:

ನಮ್ಮ ಸೌರಮಂಡಲದ ಕೇಂದ್ರವಾದ ಸೂರ್ಯನ ಗಾತ್ರ, ನಾವು ಅಂದಾಜಿಸಿದ್ದಕ್ಕಿಂತ ಕಡಿಮೆ ಇರಬೋದು ಅನ್ನೊ ಶಾಕಿಂಗ್‌ ವಿಚಾರವನ್ನ ವಿಜ್ಞಾನಿಗಳು ಹೇಳಿದ್ದಾರೆ. ಜಪಾನ್‌ನ ಮಸಾವೊ ಟಕಾಟ ಹಾಗೂ ಬ್ರಿಟನ್‌ನ ಡೌಗ್ಲಾಸ್‌ ಘೋವ್‌ರ ಈ ಹೊಸ ಅನ್ವೇಷಣೆ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸೂರ್ಯನ ರೇಡಿಯಸ್‌ ಅಳತೆ ಮಾಡಲು ಹಲವು ಮಾನದಂಡಗಳಿವೆ. ಈ ಮೊದಲು f-mode ಅಂದ್ರೆ ಫಂಡಮೆಂಟಲ್‌ ಗ್ರಾವಿಟಿ ಮೋಡ್‌ನಿಂದ ಅಳತೆ ಮಾಡಲಾಗ್ತಿತ್ತು. ಇದ್ರಲ್ಲಿ ಸೂರ್ಯನ ಮೇಲ್ಮೈಯಿಂದ ಬರೋ ಶಬ್ದದ ಅಲೆಗಳಿಂದ ಲೆಕ್ಕ ಹಾಕಲಾಗ್ತಿತ್ತು. ಆದ್ರೆ ಸದ್ಯದ ಸಂಶೋಧನೆ ಪ್ರಕಾರ ಮೇಲ್ಮೈ ಶಬ್ಧದ ಅಲೆಗಳು ಸೂರ್ಯನ ಗುರುತ್ವಾಕರ್ಷಣೆ, ಕಾಂತೀಯ ಬಲಕ್ಕೆ ಒಳಗಾಗೋದ್ರಿಂದ, ಅವು ಸೂರ್ಯನ ಹೊರಪದರವಾದ ಫೋಟೋಸ್ಪಿಯರ್‌ನ ಅಂಚಿಗೆ ತಲುಪೋದಿಲ್ಲ. ಹಾಗಾಗಿ ಅದರ ಆಧಾರದಲ್ಲಿ ಸೂರ್ಯನ ರೇಡಿಯಸ್ಸನ್ನು ಅಳತೆ ಮಾಡೋದು ಅಷ್ಟು ಸೂಕ್ತವಲ್ಲ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಬದಲಿಗೆ p-mode ಅಂದ್ರೆ pressure ಅಥ್ವಾ ಒತ್ತಡದಿಂದ ಸೂರ್ಯನ ಪ್ಲಾಸ್ಮಾ ಒಳಪದರದಲ್ಲಿ ಬಂಧಿಯಾಗಿರೋ ಶಬ್ಧದ ವಿಶ್ಲೇಷಣೆಯಿಂದ ಅಳತೆ ಮಾಡೋದು ಸೂಕ್ತ ಅಂದಿದ್ದಾರೆ. ಹೀಗೆ ಅಂದಾಜಿಸಿದಾಗ ಸೂರ್ಯ ನಾವು ಅಂದುಕೊಂಡದ್ದಕ್ಕಿಂತ‌ ಒಂಚೂರು ಅಂದ್ರೆ ನೂರಾರು ಕಿಲೋಮೀಟರ್‌ನಷ್ಟು ಕಡಿಮೆ ಗಾತ್ರ ಹೊಂದಿರೋದು ಗೊತ್ತಾಗಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಎಷ್ಟು ಚಿಕ್ಕವನು ಅನ್ನೋ ಕ್ಲಾರಿಟಿ ಇನ್ನಷ್ಟೇ ಸಿಗಬೇಕಿದೆ. ಅಂದ್ಹಾಗೆ ಸೂರ್ಯನ ರೇಡಿಯಸ್(ತ್ರಿಜ್ಯ) ಸುಮಾರು 6,96,340 ಕಿಲೋಮೀಟರ್‌ನಷ್ಟಿದೆ.

-masthmagaa.com

Contact Us for Advertisement

Leave a Reply