ಗಿಣಿರಾಮ ಧಾರಾವಾಹಿ ಖ್ಯಾತಿಯ “ವಾಟ್ ಎವರ್ ಮಾಳವಿಕಾ” ಹಾಟ್ ಅವತಾರ!

masthmagaa.com:

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಗಿಣಿರಾಮ ಧಾರಾವಾಹಿಯಲ್ಲಿ ಇಂಗ್ಲಿಷ್ ಶಿಕ್ಷಕಿ ಮಾಳವಿಕಾ ಪಾತ್ರ ಈಗ ಕರ್ನಾಟಕದ ಮನೆ ಮನೆಗಳಲ್ಲಿ ಚಿರಪರಿಚಿತ. ಘಳಿಗೆಗೊಮ್ಮೆ “ವಾಟೆವರ್” ಎನ್ನುತ್ತಾ ಶಿವರಾಮ ಮತ್ತು ಮಹತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸುವ ಮಾಳವಿಕಾ, ಸಧ್ಯ ವಿಲನ್ ಸುಂದರ್ ಮೂರ್ತಿ ಜೊತೆ ಸೇರಿ ನಡೆಸುವ ಕುತಂತ್ರಗಳು ಹಲವಾರು. ಆದ್ರೆ ಖಳ ನಾಯಕರು ಮಾಡುವ ಯಾವುದೇ ಪ್ಲಾನ್ ವರ್ಕ್ ಔಟ್ ಆಗದೇ ನಗೆಪಾಟಲಿಗೆ ಈಡಾಗುವುದೇ ಗಿಣಿ ರಾಮ ಧಾರವಾಹಿಯ ಸ್ಪೆಷಾಲಿಟಿ.

ಸಾಮಾನ್ಯವಾಗಿ ಧಾರವಾಹಿಗಳಲ್ಲಿ ವಿಲನ್ ಗಳ ಅಬ್ಬರ ಜಾಸ್ತಿ. ಆದರೆ ತಮ್ಮ ಧಾರವಾಹಿಯ ಖಳನಟರನ್ನ ಜಾಸ್ತಿ ಅಬ್ಬರಿಸಲು ಬಿಡದೆ ಬಹಳ ಸಟ್ಟಲ್ ಆಗಿ ತೋರಿಸುವ ಕಲೆ ನಿರ್ದೇಶಕ ಪ್ರೀತಂ ಶೆಟ್ಟಿ ಅವರಿಗೆ ಸಿದ್ಧಿಸಿದೆ. ಬಹುಶಃ ಇದೇ ಕಾರಣಕ್ಕೆ ಗಿಣಿರಾಮ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತ ಭಿನ್ನ.

“ವಾಟೆವರ್ ಮಾಳವಿಕಾ” ಎಂದೇ ಹೆಸರು ಮಾಡಿರುವ ಈ ನಟಿಯ ನಿಜವಾದ ಹೆಸರು ನಿಕಿತಾ ದೊರ್ತೋಡಿ. ಧಾರಾವಾಹಿಯಲ್ಲಿ ನಾಯಕ ಶಿವರಾಮನ ತಂಗಿ ಸೀಮಾಳಿಗೆ ಇಂಗ್ಲಿಷ್ ಟೀಚರ್ ಆಗಿ ಬಂದ ಮಾಳವಿಕಾ ಈಗ ಧಾರವಾಹಿಯ ಪ್ರಮುಖ ವಿಲನ್ ಗಳಲ್ಲಿ ಒಬ್ಬರು. ಧಾರಾವಾಹಿಯಲ್ಲಿ ಸೀರೆ ಉಟ್ಟು “ವಾಟೆವರ್” ಎಂದು ನಲಿಯುವ ನಿಕಿತಾ ನಿಜ ಜೀವನದಲ್ಲಿ ತುಂಬಾ ಹಾಟ್. ಇದಕ್ಕೆ ಕಾರಣ ನಿಕಿತಾ ತಮ್ಮ ಇನ್ಸ್ತಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳು.

ನಿಕಿತಾ ಅವರ ಇನ್ಸ್ತಗ್ರಂ ಖಾತೆ ನೋಡಲು ಕೆಳಗೆ ಕ್ಲಿಕ್ ಮಾಡಿ?

Nikitha Dorthody

-masthmagaa.com

 

 

Contact Us for Advertisement

Leave a Reply