ಸೌರವ್‌ ಗಂಗೂಲಿ ಮನೆಯಲ್ಲಿ ಅಮಿತ್‌ ಷಾ ಔತಣಕೂಟ!

masthmagaa.com:

ಕೊಲ್ಕತ್ತಾ ಪ್ರವಾಸದಲ್ಲಿರೊ ಗೃಹ ಸಚಿವ ಅಮಿತ್‌ ಷಾ ನಿನ್ನೆ ರಾತ್ರಿ ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಮನೆಯಲ್ಲಿ ಭೋಜನ ಸವಿದಿದ್ದಾರೆ. ಅಮಿತ್‌ ಷಾ ಅವ್ರ ಮಗ ಜಯ್‌ ಷಾ ಮತ್ತು ಗಂಗೂಲಿ ಬಿಸಿಸಿಐನಲ್ಲಿ ಸಹೋದ್ಯೋಗಿಗಳು. ಹಾಗಾಗಿ ಇದು ಆದರಣೀಯ ಭೇಟಿ ಅಂತ ಹೇಳಲಾಗ್ತಿದೆ. ಇನ್ನು ಗಂಗೂಲಿ ಈ ಔತಣಕೂಟವನ್ನ ರಾಜಕೀಯ ದೃಷ್ಟಿಯಲ್ಲಿ ನೋಡಬಾರ್ದು ಅಂತ ಹೇಳಿದ್ದಾರೆ. ಆದ್ರೆ ರಾಜಕೀಯ ಉದ್ದೇಶ ಇದ್ರು ಅದ್ರಲ್ಲೇನು ಆಶ್ಚರ್ಯ ಇಲ್ಲ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply