ದ.ಆಫ್ರಿಕಾದಲ್ಲಿ ಅಗ್ನಿ ಅವಘಡ: 2 ಸಾವು, ಸಾವಿರಾರು ನಿರಾಶ್ರಿತರು!

masthmagaa.com:

ನೂರಾರು ಗುಡಿಸಲುಗಳಿಗೆ ಬೆಂಕಿ ಹತ್ಕೊಂಡ ಪರಿಣಾಮ ಇಬ್ಬರು ಮೃತಪಟ್ಟಿರೊ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಕೇಪ್‌ ಟೌನ್‌ ನಗರದ ಬಳಿಯ ಗುಡಿಸಲುಗಳಿಗೆ ಬೆಂಕಿ ಹತ್ಕೊಂಡಿತ್ತು. ಈ ವೇಳೆ ಒಟ್ಟು ಇಬ್ಬರು ಬಲಿಯಾಗಿದ್ದು, 2 ಸಾವಿರ ಜನ ನಿರಾಶ್ರಿತರಾಗಿದ್ದಾರೆ. ಇನ್ನು ಬೆಂಕಿ ಹತ್ಕೊಂಡ ಬಗ್ಗೆ ಕಾರಣ ತಿಳಿಯಲು ತನಿಖೆ ನಡೆಸಲಾಗ್ತಿದೆ ಅಂತ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply