ಮಧ್ಯಪ್ರದೇಶ: ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಚೀತಾ ʻಉದಯ್‌ʼ ಸಾವು

masthmagaa.com:

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾವನದಲ್ಲಿದ್ದ ದಕ್ಷಿಣ ಆಫ್ರಿಕಾದಿಂದ ಕರೆತರಲಾಗಿದ್ದ 12 ಚೀತಾಗಳಲ್ಲಿ ಒಂದು ಚೀತಾ ಮೃತಪಟ್ಟಿದೆ. ಈ ವರ್ಷವಷ್ಟೇ ಭಾರತಕ್ಕೆ ತರಲಾಗಿದ್ದ ʻಉದಯ್ʼ ಎಂಬ ಹೆಸರಿನ ಗಂಡು ಚೀತಾ ಅನಾರೋಗ್ಯದಿಂದ ಮೃತಪಟ್ಟಿದೆ. ಇನ್ನು ಆರು ವರ್ಷದ ಚೀತಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಚೀತಾಗೆ ಉಂಟಾಗಿದ್ದ ಅನಾರೋಗ್ಯ ಸಮಸ್ಯೆ ಕುರಿತು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೆ ನಮೀಬಿಯಾದಿಂದ ತರಲಾಗಿದ್ದ 8 ಚೀತಾಗಳ ಪೈಕಿ ʻಸಶಾʼ ಅನ್ನೊ ಹೆಣ್ಣು ಚೀತಾ ಕಳೆದ ತಿಂಗಳು ಮೃತಪಟ್ಟಿತ್ತು.

-masthmagaa.com

Contact Us for Advertisement

Leave a Reply