ಕಾಸ್ಟ್ಲಿ ಗಿಫ್ಟ್‌ ಪಡೆದು ಸಂಕಷ್ಟಕ್ಕೀಡಾದ ಸೌತ್‌ ಕೊರಿಯಾ ಫಸ್ಟ್‌ ಲೇಡಿ!

masthmagaa.com:

ದಕ್ಷಿಣ ಕೊರಿಯಾದಲ್ಲಿ ಪ್ರಾನ್ಸ್‌ ಕಂಪನಿಯೊಂದ್ರ ಲಕ್ಷುರಿ ಹ್ಯಾಂಡ್‌ಬ್ಯಾಗೊಂದು ಸರ್ಕಾರಾನೆ ಅಲುಗಾಡಿಸ್ತಿದೆ. ಸೌತ್‌ ಕೊರಿಯಾ ಪ್ರೆಸಿಡೆಂಟ್‌ ಯೂನ್‌ ಸುಕ್‌ ಯೆಓಲ್‌ ಪತ್ನಿ ಹಾಗೂ ಫಸ್ಟ್‌ ಲೇಡಿ ಕಿಮ್‌ ಕಿಯೋನ್‌ ಹೀ ಅವ್ರಿಗೆ ಒಂದು ಗಿಫ್ಟ್‌ ಬಂತು. ಫ್ರಾನ್ಸ್‌ ಮೂಲದ Dior ಕಂಪನಿಯ ಹ್ಯಾಂಡ್‌ ಬ್ಯಾಗ್‌ ಒಂದು ಅವ್ರಿಗೆ ಗಿಫ್ಟ್‌ ಆಗಿ ಬಂದಿತ್ತು. ಹೆಚ್ಚೇನು ಅಲ್ಲ, ಸುಮಾರು 2 ಲಕ್ಷ ಬೆಲೆ ಬಾಳೋ ಬ್ಯಾಗ್‌ ಅದು, ಆದ್ರೆ ಸೌತ್‌ ಕೊರಿಯಾದ won ಕರೆನ್ಸಿಯಲ್ಲಿ ಮೂರು ಮಿಲಿಯನ್‌ ಆಗುತ್ತೆ. ಅಲ್ಲಿ 1 ಮಿಲಿಯನ್‌ won ಗಿಂತ ಹೆಚ್ಚಿನ ಬೆಲೆಯ ಗಿಫ್ಟ್‌ನ್ನ ಅಧಿಕಾರದಲ್ಲಿರೋದು ಅಥ್ವಾ ಅವ್ರ ಕುಟುಂಬಸ್ಥರು ಅಕ್ಸೆಪ್ಟ್‌ ಮಾಡ್ಕೊಳ್ಳೋ ಹಾಗಿಲ್ಲ. ಸೋ ಈಗ ಅಲ್ಲಿ ಈ ವಿಚಾರವೇ ದೊಡ್ದ ವಿವಾದವಾಗಿದೆ. ಅಲ್ಲದೆ ಕಿಯೋನ್‌ ಹೀ ಅವ್ರನ್ನ ಅಲ್ಲಿನ ವಿಪಕ್ಷಗಳು ಫ್ರೆಂಚ್‌ ರಾಣಿ ಮರೀ ಆಂಟೋಯಿನೆಟ್‌ಗೆ ಕಂಪೇರ್‌ ಮಾಡ್ತಿದ್ದಾರೆ. ಅಂದ್ಹಾಗೆ ಇವ್ರಿಗೆ ಆ ಗಿಫ್ಟ್‌ ಬಂದಿರೋದು 2022ರ ಸೆಪ್ಟೆಂಬರ್‌ನಲ್ಲಿ. ಗಿಫ್ಟ್‌ ಕೊಟ್ಟ ಪಾದ್ರಿ ತಮ್ಮ ಸೀಕ್ರೇಟ್‌ ವಾಚ್‌ ಕ್ಯಾಮೆರಾದಲ್ಲಿ ಇದನ್ನ ರೆಕಾರ್ಡ್‌ ಮಾಡ್ಕೊಂಡಿದ್ರು. ಈಗ ಆ ವೀಡಿಯೋ ವೈರಲ್ಲಾಗಿದೆ.

-masthmagaa.com

Contact Us for Advertisement

Leave a Reply