ಸೌತ್‌ ಕೊರಿಯಾ ವಿರೋಧ ಪಕ್ಷದ ನಾಯಕನ ಹತ್ಯೆಗೆ ಯತ್ನ!

masthmagaa.com:

ಏಪ್ರಿಲ್‌ನಲ್ಲಿ ನಡೆಯೋ ದಕ್ಷಿಣ ಕೊರಿಯಾ ಪಾರ್ಲಿಮೆಂಟ್‌ ಎಲೆಕ್ಷನ್‌ ಮುನ್ನವೇ ಅಲ್ಲಿನ ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯೂಂಗ್‌ರ ಹತ್ಯೆ ಯತ್ನ ನಡೆದಿದೆ. ದುಷ್ಕರ್ಮಿಯೊಬ್ಬ ಚಾಕು ಇರಿದು ಮ್ಯೂಂಗ್‌ರನ್ನ ಕೊಲ್ಲಲು ಯತ್ನಿಸಿದ್ದಾನೆ. ಅಲ್ಲಿನ ಎರಡನೇ ದೊಡ್ಡ ನಗರ ಬುಸಾನ್‌ಗೆ ಭೇಟಿ ನೀಡಿದಾಗ ವ್ಯಕ್ತಿಯೊಬ್ಬ ಜೇ-ಮ್ಯೂಂಗ್‌ಗೆ ಆಟೋಗ್ರಾಫ್‌ ಕೇಳೊ ನೆಪದಲ್ಲಿ ಹತ್ತಿರ ಬಂದು ಈ ಕೃತ್ಯ ಎಸಗಿದ್ದಾನೆ. ಸ್ಥಳದಲ್ಲೇ ದುಷ್ಕರ್ಮಿಯನ್ನ ಅರೆಸ್ಟ್‌ ಮಾಡಲಾಗಿದ್ದು, ಸದ್ಯ ಪ್ರಾಣಪಾಯದಿಂದ ಪಾರಾಗಿರೋ ಮ್ಯೂಂಗ್‌ರನ್ನ ಸಮೀಪದ ಯುನಿವರ್ಸಿಟಿ ಹಾಸ್ಪಿಟಲ್‌ಗೆ ಸ್ಥಳಾಂತರಿಸಲಾಗಿದೆ. ಇನ್ನು ಈ ಘಟನೆಯನ್ನ ಖಂಡಿಸಿರೋ ಸೌತ್‌ ಕೊರಿಯನ್‌ ಪ್ರೆಸಿಡೆಂಟ್‌ ಯೂನ್‌ ಸುಕ್ ಯೋಲ್‌, ಶೀಘ್ರವೇ ಜೇ-ಮ್ಯೂಂಗ್‌ ಗುಣಮುಖರಾಗಲು ಉತ್ತಮ ಚಿಕಿತ್ಸೆ ನೀಡುವಂತೆ ಹಾಸ್ಪಿಟಲ್‌ ಸಿಬ್ಬಂದಿಗೆ ಸೂಚಿಸಿದ್ದಾರೆ. ಅಂದ್ಹಾಗೆ ಈ ಹಿಂದೆ ಸೌತ್‌ ಕೊರಿಯಾದ ಮಾಜಿ ಅಧ್ಯಕ್ಷ ಪಾರ್ಕ್‌ ಜಿಯುನ್‌ ಎ-ಹೈ ಅವರ ಮೇಲೂ ಕೂಡ ಇದೇ ರೀತಿ ದಾಳಿ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply