ಅಂತರಿಕ್ಷಕ್ಕೆ ಹಾರಿದ ಸೌದಿ ಅರೇಬಿಯಾ ಮಹಿಳೆ! ಇದು ನಿಜಕ್ಕೂ ದೊಡ್ಡ ಬೆಳವಣಿಗೆ ಎಂದ ಜಗತ್ತು!

masthmagaa.com:

ಆಧುನಿಕತೆಯತ್ತ ಶರವೇಗದಲ್ಲಿ ವಾಲುತ್ತಿರೋ ಸೌದಿ ಅರೇಬಿಯಾ ಮತ್ತೊಂದು ಮಹತ್ವದ ಘಟನೆಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಸೌದಿಯ ಮಹಿಳಾ ಗಗನಯಾತ್ರಿಯೊಬ್ರು ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಮೆರಿಕದಲ್ಲಿ ಸ್ಪೇಸ್‌ಎಕ್ಸ್‌ನ ಚಾಟೆಡ್‌ ರಾಕೆಟ್‌ನಲ್ಲಿ ಸೌದಿ ಮಹಿಳೆ ರಾಯನಾ ಬರ್ನಾವಿ ಗಗನಕ್ಕೆ ಹಾರಿದ್ದಾರೆ. ಸ್ತನ ಕ್ಯಾನ್ಸರ್ ಸಂಶೋಧಕರಾದ ರೈಯಾನಾ ಬರ್ನಾವಿ ಜೊತೆಗೆ ಸೌದಿಯ ಅಲಿ ಅಲ್-ಕರ್ನಿ ಅನ್ನೋ ಫೈಟರ್ ಪೈಲಟ್ ಕೂಡ ಇದ್ದಾರೆ. ಒಟ್ಟು ನಾಲ್ಕು ಸದಸ್ಯರ ತಂಡ ಬಾಹ್ಯಾಕಾಶ್ಯಕ್ಕೆ ಹಾರಿದ್ದು ಅವರೆಲ್ಲಾInternational Space Station ನಲ್ಲಿ ಸುಮಾರು 10 ದಿನಗಳ ಕಳೆಯಲಿದ್ದಾರೆ. ಸುಮಾರು 20 ಪ್ರಯೋಗಗಳನ್ನು ಮಾಡಲಿದ್ದಾರೆ. ಸೌದಿಯಲ್ಲಿ ಎಂಬಿಎಸ್‌ ಅಂದ್ರೆ ಮೊಹ್ಮದ್‌ ಬಿನ್‌ ಸಲ್ಮಾನ್‌ ಅಧಿಕಾರ ವಹಿಸಿಕೊಂಡು ಡಿ-ಫ್ಯಾಕ್ಟೋ ರೂಲರ್‌ ಆದ್ಮೇಲೆ ಈ ರೀತಿಯ ಬೆಳವಣಿಗೆಗಳು ನಡೀತಾನೆ ಇವೆ. ಮಹಿಳೆಯರ ಎಲ್ಲಾ ಸ್ವಾತಂತ್ರಕ್ಕೂ ಕೊಕ್ಕೆ ಹಾಕಿರೋ ಕೆಲವು ಮುಸ್ಲಿಂ ದೇಶಗಳ ಮಧ್ಯೆದಲ್ಲೇ ಇದ್ಕೊಂಡು ತಾನು ಮುಸ್ಲಿಂ ದೇಶಗಳ ನಾಯಕ ಅಂದುಕೊಳ್ಳುತ್ತಲೇ ಮಹಿಳೆಯರಿಗೆ ಸೌದಿ ಅನೇಕ ಸ್ವಾತಂತ್ರಳನ್ನ ನೀಡ್ತಾ ಇದೆ. ಅಥವಾ ಅವರಿಗೆ ಇದ್ದ ನಿರ್ಬಂಧಗಳನ್ನ ತಗೀತಾ ಇದೆ. ಈಗಾಗಲೇ ಮಹಿಳೆಯರಿಗೆ ಕಾರ್‌ ಡ್ರೈವಿಂಗ್‌ ಕೊಟ್ಟು, ಮಹಿಳೆಯರಿಗೆ ಪೈಲಟ್‌ ಆಗೋಕೂ ಅವಕಾಶ ನೀಡಿ ಎಂಬಿಎಸ್‌ ಎಲ್ಲರ ಗಮನ ಸೆಳೆದಿದ್ರು. ಇದೀಗ ಅವರ ಆಡಳಿತಾವಧಿಯಲ್ಲೇ ಸೌದಿಯ ಮಹಿಳೆ ಅಂತರಿಕ್ಷಕ್ಕೆ ಹಾರಿದ್ದಾರೆ. ಹ್ಮ.. ಈ ಕಡೆ ಸೌದಿ ಮಹಿಳೆ ಅಂತಾರಾಷ್ಟ್ರೀಯ ಪ್ರಯಾಣ ಮಾಡ್ತಿದ್ದಾರೆ. ಆ ಕಡೆ ಇರಾನ್‌ನಲ್ಲಿ ಹೆಣ್ಣು ಮಕ್ಕಳು ಹಿಜಬ್‌ ಹಾಕಿಲ್ಲ ಅಂತ ಕೊಲೆ ಮಾಡ್ತಿದಾರೆ. ಇನ್ನೂ ಇನ್ನೊಂದು ಸ್ವಲ್ಪ ಮುಂದೆ ಹೋಗಿ ಅಫ್ಘಾನಿಸ್ತಾನದಲ್ಲಿ ನೋಡೋದೇ ಬೇಡ. ನಿಮಗೆ ಗೊತ್ತು ಅಲ್ಲಿ ಇನ್ಯಾವ ಪರಿಸ್ಥಿತಿ ಇದೆ ಅಂತ.

-masthmagaa.com

Contact Us for Advertisement

Leave a Reply