550 ಮಕ್ಕಳನ್ನ ಹೊಂದಿರುವ ಮಹಾತಂದೆಗೆ ದಂಡ ವಿಧಿಸಿದ ನೆದರ್ಲ್ಯಾಂಡ್ಸ್‌ ಕೋರ್ಟ್‌! ಯಾಕೆ?

masthmagaa.com:

ವೀರ್ಯದಾನ ಮಾಡಿ ಸುಮಾರು 550 ಮಕ್ಕಳಿಗೆ ತಂದೆಯಾಗಿರುವ ವ್ಯಕ್ತಿಯೊಬ್ಬನಿಗೆ ಇನ್ಮುಂದೆ ಆತ ವೀರ್ಯದಾನ ಕಂಟಿನ್ಯೂ ಮಾಡದಂತೆ ನೆದರ್ಲ್ಯಾಂಡ್‌ ಕೋರ್ಟ್‌ ಬ್ಯಾನ್‌ ಮಾಡಿದೆ. ಜೊನಾಥನ್‌ ಮೈಜರ್‌ ಅನ್ನೋ ವ್ಯಕ್ತಿ ತನ್ನ ಸೆಮೆನ್‌ ದಾನ ಮಾಡ್ತಿದ್ದು, ಆತನ ವೀರ್ಯದಿಂದ ಇಲ್ಲಿಯವರೆಗೆ 550 ಮಕ್ಕಳು ಜನಿಸಿದ್ದಾರೆ. ಜಗತ್ತಿನಾದ್ಯಂತ ಈತ ಮಕ್ಕಳನ್ನ ಹೊಂದಿದ್ದಾನೆ. ಇವನ ಈ ಕೆಲಸದಿಂದ ತಮ್ಮ ಮಕ್ಕಳಿಗೆ ಅರೆ ಸಹೋದರರು (HALF BROTHERS) ಎಲ್ಲಾ ಕಡೆ ಇದಾರೆ ಅನ್ನೋದು ತಿಳಿದು ಬಂದ್ರೆ ಸಮಸ್ಯೆಯಾಗುತ್ತೆ ಅಂತ ಪೋಷಕರು ಕಳವಳ ವ್ಯಕ್ತಪಡಿಸಿದ್ದು, ಈತನ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಾಗಿ ಪೋಷಕರು ಹಾಗೂ ಮಕ್ಕಳ ಹಿತಾಸಕ್ತಿಯಿಂದ ಇನ್ನು ಮುಂದೆ ಈತ ಕ್ಲಿನಿಕ್‌ಗಳಿಗೆ ವೀರ್ಯದಾನ ಮಾಡುವುದನ್ನು ನಿಷೇಧಿಸಲಾಗಿದೆ ಅಂತ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ಅಲ್ದೇ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ವೀರ್ಯ ದಾನ ಮಾಡಿದರೆ ಪ್ರತಿ ಉಲ್ಲಂಘನೆಗೆ ಸುಮಾರು 90 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಅಂತ ನ್ಯಾಯಾಲಯ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply