ಬೇರೆ ದೇಶದಿಂದ ರಷ್ಯಾಗೆ ಮಾಹಿತಿ ಕೊಡ್ತಿದ್ದವರು ಅರೆಸ್ಟ್!

masthmagaa.com:

ಜರ್ಮನಿಯ ಬರ್ಲಿನ್​ನಲ್ಲಿರೋ ಬ್ರಿಟನ್‌ ರಾಯಭಾರ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲ್ಸ ಮಾಡ್ತಿದ್ದ ಬ್ರಿಟಿಷ್‌ ಪ್ರಜೆಯೊಬ್ಬ ರಷ್ಯಾಪರ ಗೂಡಾಚಾರ ಮಾಡ್ತಿದ್ದ ಅಂತೇಳಿ ಲಂಡನ್‌ ಪೋಲಿಸರು ಕೇಸು ದಾಖಲಿಸಿದ್ದಾರೆ. ಈತ ಜರ್ಮನಿಯಿಂದ ರಷ್ಯಾದ ಇಂಟಲಿಜೆನ್ಸ್‌ ಸರ್ವೀಸಸ್‌ಗೆ ಮಾಹಿತಿ ನೀಡ್ತಿದ್ದ ಎನ್ನಲಾಗಿದೆ. ಈಗ ಈತನನ್ನು ಜರ್ಮನಿಯಿಂದ ಬ್ರಿಟನ್‌ಗೆ ಹಸ್ತಾಂತರ ಮಾಡಿದ್ದು, ಲಂಡನ್‌ ಪೋಲಿಸರು ಬಂಧಿಸಿದ್ದಾರೆ. ಇನ್ನೊಂದ್‌ ಕಡೆ ಪೋಲೆಂಡ್‌ ಕೂಡ ಬೆಲಾರುಸ್‌ನ ಇಬ್ಬರು ಪ್ರಜೆಗಳು ಗೂಡಾಚಾರ ನಡೆಸ್ತಿದ್ರು ಅಂತ ಅವ್ರನ್ನ ಅರೆಸ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply