ಸಂಯಮದಿಂದ ಇರಿ, ಎಲ್ಲಾ ಸರಿ ಮಾಡ್ತೀನಿ: ಲಂಕಾ ಪಿಎಂ

masthmagaa.com:

ಉದ್ವಿಗ್ನತೆಯ ಬೆಂಕಿಯಲ್ಲಿ ಶ್ರೀಲಂಕಾ ಹೊತ್ತಿ ಉರೀತಾ ಇರೋ ಸಮಯದಲ್ಲಿ ಅಲ್ಲಿನ ಪ್ರಧಾನಿ ಮಹಿಂದಾ ರಾಜಪಕ್ಸ ದೇಶವನ್ನುದ್ಧೇಶಿಸಿ ವಿಶೇಷ ಭಾಷಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವ್ರು, ಎಲ್ರಿಗೂ ಸಂಯಮದಿಂದ ಇರಿ ಸರ್ಕಾರ ಬಿಕ್ಟಟ್ಟನ್ನ ಶಮನ ಮಾಡುತ್ತೆ ಅಂತ ಮನವಿ ಮಾಡಿದ್ದಾರೆ. ಜೊತೆಗೆ ನೀವು ರೋಡಲ್ಲಿ ಪ್ರತಿಭಟನೆ ಮಾಡುವ ಪ್ರತಿ ಸೆಕೆಂಡ್‌ಗೂ ನಾವು ಡಾಲರ್‌ನ ಕಳೆದುಕೊಳ್ತಾ ಇದ್ದೀವಿ. ಸರ್ಕಾರ ಮತ್ತು ಅಧ್ಯಕ್ಷರು ಪ್ರತಿ ಸೆಕೆಂಡ್‌ ಕೂಡ ಬಿಕ್ಕಟ್ಟನ್ನ ಪರಿಹರಿಸೋಕೆ ಪ್ರಯತ್ನಾ ಮಾಡ್ತಾ ಇದ್ದಾರೆ ಅಂತ ಹೇಳಿದ್ದಾರೆ. ಫುಲ್‌ ಎಮೋಷನಲ್‌ ಆಗಿ ಮಾತಾಡಿರೋ ರಾಜಪಕ್ಸ ಪ್ರತಿಭಟನಾಕಾರರು ಎಲ್‌ಟಿಟಿಇ ವಿರುದ್ಧ ಹೋರಾಡಿದ ಲಂಕಾದ ಹುತಾತ್ಮ ಯೋಧರಿಗೆ ಅಪಮಾನ ಮಾಡ್ತಾ ಇದ್ದಾರೆ ಅಂತ ಆರೋಪಿಸಿದ್ದಾರೆ.
ಇನ್ನೊಂದ್‌ ಕಡೆ ಶ್ರೀಲಂಕಾ ತನ್ನ 51 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 38 ಲಕ್ಷ ಕೋಟಿ ಸಾಲವನ್ನ ಮರುಪಾವತಿ ಮಾಡೋಕೆ ಆಗಲ್ಲ ಅಂತ ಘೋಷಿಸಿದೆ. ಈ ಸಂಬಂಧ ಲಂಕಾದ ಆರ್ಥಿಕ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಸರ್ಕಾರ ತುರ್ತು ನಿರ್ಧಾರವನ್ನ ತಗೋಳ್ತಾ ಇದೆ. ದೇಶದ ಆರ್ಥಿಕತೆ ಇನ್ನೂ ಕೆಟ್ಟದಾಗೋದನ್ನ ತಡೆಯೋಕೆ ಕೊನೆಯ ಆಯ್ಕೆಯಾಗಿ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply