ಶ್ರೀಲಂಕಾದ ಜೊತೆಗೆ ತುರ್ತು ಮೀಟಿಂಗ್‌ ಮಾಡ್ಬೇಕು ಎಂದ ಚೀನಾ! ಯಾಕೆ?

masthmagaa.com:

ಭಾರತದ ಒತ್ತಾಯಕ್ಕೆ ಮಣಿದು ಚೀನಾದ ಹಡಗಿನ ಪ್ರವೇಶಕ್ಕೆ ಲಂಕಾ ಸರ್ಕಾರ ತಾತ್ಕಲಿಕ ನಿಷೇಧ ಹೇರಿತ್ತು. ಇದರ ಬೆನ್ನಲ್ಲೇ ಈಗ ಲಂಕಾ ಸರ್ಕಾರದ ಜೊತೆಗೆ ಚೀನಾ ತುರ್ತುಸಭೆ ನಡೆಸಲಿದೆ ಅಂತ ಹೇಳಲಾಗ್ತಿದೆ. ಶ್ರೀಲಂಕಾದಲ್ಲಿರೋ ಚೀನಾದ ರಾಯಭಾರ ಕಛೇರಿ ಲಂಕಾದ ಹಿರಿಯ ಅಧಿಕಾರಿಗಳ ಜೊತೆಗೆ ಅರ್ಜೆಂಟ್‌ ಮೀಟಿಂಗ್‌ ಮಾಡೋಕೆ ಮನವಿ ಮಾಡಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ. ಅಂದ್ಹಾಗೆ ಚೀನಾದ ಬಾಹ್ಯಾಕಾಶ ಪತ್ತೆದಾರಿ ʻಯುವಾನ್‌ ವಾಂಗ್‌ 5ʼ ಅನ್ನೋ ಹಡಗು ಜುಲೈ 13ರಂದೇ ಅಲ್ಲಿನ ಜಿಯಾಂಗ್‍ ಬಂದರಿನಿಂದ ಶ್ರೀಲಂಕಾಗೆ ಪ್ರವಾಸ ಬೆಳೆಸ್ತಾಯಿದೆ.ಇದು ಅಲ್ಲಿಂದ ನೇರವಾಗಿ ಹಿಂದೂಮಹಾಸಾಗರ ತಲುಪಿ ಶ್ರೀಲಂಕಾದ ಹಂಬಂತೋಟ ಅಂದ್ರೆ ಶ್ರೀಲಂಕಾದಿಂದ ಚೀನಾ ಅಡ ಇಟ್ಕೋಂಡಿರೋ ಪೋರ್ಟ್‌ಗೆ ಬರುತ್ತೆ. ಇದು ಭಾರತಕ್ಕೂ ತುಂಬಾ ಹತ್ತಿರದಲ್ಲೇ ಇರೋದ್ರಿಂದ ಇದಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಚೀನಾದ ಈ ಹಡಗಿನ ಪ್ರಯಾಣ ಭಾರತದ ಸೂಕ್ಷ್ಮ ಹಾಗೂ ಪ್ರಮುಖ ಸ್ಥಳಗಳ ಮೇಲೆ ಕಣ್ಣಿಡೋಕೆ ದುರಪಯೋಗ ಆಗ್ಬೋದು ಅಂತ ಹೇಳಿ ಶ್ರೀಲಂಕಾಗೆ ತೀವ್ರ ಒತ್ತಡ ಹೇರಿತ್ತು. ಈ ಮೊದಲು ಚೀನಾದ ಹಡಗು ನೀವು ಅಂದ್ಕೊಂಡಿರೋ ರೀತಿ ಅಲ್ಲ. ಬರೀ ತೈಲದ ಉದ್ದೇಶದಿಂದ ಮಾತ್ರ ಬರ್ತಿದೆ ಅಂತ ಹೇಳಿ ಭಾರತವನ್ನ ಸಮಾಧಾನ ಮಾಡೋಕೆ ಮುಂದಾಗಿತ್ತು ಶ್ರೀಲಂಕಾ. ಆದ್ರೆ, ಭಾರತದಿಂದ ಕಠಿಣ ಎಚ್ಚರಿಕೆ ಬಂದ್ಮೇಲೆ ಲಂಕಾ ಸರ್ಕಾರ ಚೀನಾದ ಹಡಗನ್ನ ಅನಿರ್ಧಿಷ್ಟಾವಧಿಗೆ ಅಂದ್ರೆ ನಾವು ಹೇಳೋವರೆಗೂ ಬರೋದು ಬೇಡ ಅಂತ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಈಗ ಚೀನಾ ಆಡಳಿತ ಲಂಕಾ ಜೊತೆ ಮೀಟಿಂಗ್‌ ಮಾಡೋಕೆ ಮುಂದಾಗಿದೆ.

-masthmagaa.com

Contact Us for Advertisement

Leave a Reply