ಆರ್ಥಿಕ ನೆರವು ನೀಡಿದ ಭಾರತಕ್ಕೆ ಕೃತಜ್ಞತೆ ಅರ್ಪಿಸಿದ ಶ್ರೀಲಂಕಾ!

masthmagaa.com:

ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿರೋ ಶ್ರೀಲಂಕಾಗೆ ಆರ್ಥಿಕ ಸಹಾಯ ಮಾಡಿದ ಭಾರತಕ್ಕೆ ನಮ್ಮ ಧನ್ಯವಾದ ಅಂತ ಶ್ರೀಲಂಕಾ ಹೇಳಿದೆ. ಭಾರತ 4 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 32.8 ಸಾವಿರ ಕೋಟಿ ರೂಪಾಯಿ ಹಣ ಸಹಾಯ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮತ್ತು ಭಾರತೀಯ ಜನತೆಗೆ ಕೃತಜ್ಞತೆಯನ್ನ ಸಲ್ಲಿಸ್ತೇವೆ. ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರೋ ನಮಗೆ ಭಾರತ ನೀಡಿರೋ ಈ ನೆರವಿನಿಂದ ನಮ್ಮ ಜನರಿಗೆ ಅಗತ್ಯ ವಸ್ತುಗಳನ್ನ ಪೂರೈಸೋಕೆ ಸಹಾಯವಾಗ್ತಿದೆ. ಜೊತೆಗೆ ಇದ್ರಿಂದ ಸ್ವಲ್ಪಮಟ್ಟಿಗೆ ಆರ್ಥಿಕ ದೃಢತೆಯನ್ನ ಪಡೆಯೋಕೆ ಸಾಧ್ಯವಾಗುತ್ತೆ ಅಂತ ಅಲ್ಲಿನ ವಿದೇಶಾಂಗ ಸಚಿವ ಅಲಿ ಸಬ್ರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply