ಕ್ರೀಡಾ ಸಚಿವರನ್ನೇ ಕಿತ್ತೆಸೆದ ಶ್ರೀಲಂಕಾ ಅಧ್ಯಕ್ಷ! ಕಾರಣ ಏನು ಗೊತ್ತಾ?

masthmagaa.com:

ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವ್ರು ಕ್ರೀಡಾ ಸಚಿವ ರೋಷನ್‌ ರಣಸಿಂಘೆ ಅವ್ರನ್ನ ನೆನ್ನೆ ಕೆಲಸದಿಂದ ವಜಾಗೊಳಿಸಿದ್ದಾರೆ. ರೋಷನ್‌ ಸಿಂಗೆ ಅವ್ರು ರನಿಲ್ ವಿಕ್ರಮಸಿಂಘೆ ವಿರುದ್ಧ ಪಾರ್ಲಿಮೆಂಟ್‌ನಲ್ಲಿ ನೀಡಿರೋ ಹೇಳಿಕೆ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ʻಕ್ರಿಕೆಟ್‌ ಮಂಡಳಿಯಲ್ಲಿ ನಡೀತಾ ಇರೋ ಭ್ರಷ್ಟಾಚಾರ ನಿಲ್ಲಿಸೋಕೆ ಪ್ರಯತ್ನ ಪಡ್ತಾ ಇರೋ ನನಗೆ ಜೀವ ಬೆದರಿಕೆ ಹಾಕಲಾಗಿದೆ. ನನ್ನ ಲೈಫ್‌ ರಿಸ್ಕ್‌ನಲ್ಲಿದೆ. ಇಂದೋ ಅಥವಾ ನಾಳೆ ನಾನು ಸಾಯಬಹುದು. ನನ್ನ ಜೀವಕ್ಕೆ ಏನಾದ್ರೂ ಆದ್ರೆ, ಅದಕ್ಕೆ ಶ್ರೀಲಂಕಾ ಅಧ್ಯಕ್ಷ ಮತ್ತು ಅವ್ರ ಚೀಫ್‌ ಸ್ಟಾಫ್‌ ಕಾರಣರಾಗ್ತಾರೆʼ ಅಂತ ರೋಷನ್‌ ರಣಸಿಂಘೆ ಆರೋಪಿಸಿದ್ರು. ಈ ಕಾರಣದಿಂದ ರನಿಲ್ ವಿಕ್ರಮಸಿಂಘೆ, ರೋಷನ್‌ ರಣಸಿಂಘೆ ಅವ್ರಿಗೆ ನೆನ್ನೆ ಟರ್ಮಿನೇಷನ್‌ ಲೆಟರ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply