ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಬಂಧದಲ್ಲಿ ತುಂಬಾ ರಾಜಕೀಯ ಇದೆ: ಶ್ರೀಲಂಕಾ ಅಧ್ಯಕ್ಷ!

masthmagaa.com:

ದಕ್ಷಿಣ ಏಷ್ಯಾ ರಾಷ್ಟ್ರಗಳ ಜೊತೆಗೆ ವ್ಯಾಪಾರ ಸಂಬಂಧದಲ್ಲಿ ತುಂಬಾ ರಾಜಕೀಯ ಇದೆ. ನಮಗೆ ಬೇಕಾದವರ ಹತ್ರ ನಾವು ವ್ಯಾಪಾರ ಮಾಡಬೇಕು ಅಂತ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ. ಶ್ರೀಲಂಕಾ ಪುನರ್ನಿಮಾಣ ಅನ್ನೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ʻ ದುರಾದೃಷ್ಟವಶಾತ್‌, ದಕ್ಷಿಣ ಏಷ್ಯಾದ ರಾಷ್ಟ್ರಗಳ ಪ್ರಾದೇಶಿಕ ವ್ಯಾಪಾರ ಒಪ್ಪಂದದಲ್ಲಿ ಹೆಚ್ಚಿನ ರಾಜಕೀಯವಿದೆ. ನಾವು ಅದನ್ನು ಪಕ್ಕಕ್ಕೆ ಇಡಬಹುದು. ಅವರ ಜೊತೆಗೆ ಬೇರೆ ಯಾವುದಾದ್ರೂ ರೀತಿಯ ಒಪ್ಪಂದಗಳನ್ನ ಹೊಂದಬೋದು. ಆದ್ರೆ ಆರ್ಥಿಕತೆಯನ್ನ ಆಚೀವ್‌ ಮಾಡೋಕಾಗಲ್ಲ ಅಂತ ಹೇಳಿದ್ದಾರೆ. ಮುಂದುವರೆದು ʻ ಮುಂದಿನ ಆರು ತಿಂಗಳಿಂದ ಒಂದು ವರ್ಷದವರೆಗೆ ನಾವು ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ ಅಂತ ನನಗೆ ಅನ್ನಿಸ್ತಾಯಿದೆ. ನಾವು ಹೆಚ್ಚು ಟಾಕ್ಸ್‌ ಪೇ ಮಾಡೋ ಏರಿಯಾಗಳ ಕಡೆಗೆ ಇನ್ವೆಸ್ಟ್‌ ಮಾಡಬೇಕು. ನೆರೆಹೊರೆಯ ದೇಶಗಳನ್ನ ನೋಡಿದ್ರೆ ನಮಗೆ ಇದು ಗೊತ್ತಾಗುತ್ತೆ. ನಾವು ಆರ್ಥಿಕತೆಯನ್ನ ಚೇತರಿಕೆಕಡೆಗೆ ಕೊಂಡ್ಯೊಯ್ಯಬೇಕಾದ್ರೆ ʻಲಾಜಿಸ್ಟಿಕ್ಸ್ ಹಾಗೂ ಪರಮಾಣು ಶಕ್ತಿಯಂತಹ ಹೊಸ ಕ್ಷೇತ್ರಗಳನ್ನು ನೋಡಬೇಕು ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply