ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೆ ಭಾರತಕ್ಕೆ ಬೆಂಬಲ ಕೊಡ್ತೀವಿ: ಶ್ರೀಲಂಕಾ

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಅನ್ನೋ ಭಾರತದ ಕೂಗಿಗೆ ಜಗತ್ತಿನ ಹಲವು ದೇಶಗಳು ಸಭೆಯಲ್ಲಿ ಬೆಂಬಲ ವ್ಯಕ್ತಪಡಿಸಿವೆ. ಈಗ ಇವುಗಳ ಸಾಲಿಗೆ ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾ ಕೂಡ ಸೇರಿಕೊಂಡಿದ್ದು ಭಾರತಕ್ಕೆ ನಮ್ಮ ಬೆಂಬಲ ಇದೆ ಅಂತ ಹೇಳಿದೆ. ಜಪಾನ್‌ ಪ್ರವಾಸದಲ್ಲಿರೋ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅಲ್ಲಿನ ವಿದೇಶಾಂಗ ಸಚಿವ ಯೋಶಿಮಶಾ ಅಯಾಶಿ ಜೊತೆಗೆ ಮಾತನಾಡಿದ್ರು. ಈ ವೇಳೆ ಜಪಾನ್‌ ಹಾಗೂ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯೋಕೆ ಲಂಕಾ ಸರ್ಕಾರ ಬೆಂಬಲ ನೀಡುತ್ತೆ ಅಂತ ಹೇಳಿದ್ದಾರೆ. ಲಂಕಾ-ಭಾರತದ ನಡುವೆ ಚೀನಾದ ವಿಚಾರವಾಗಿ ಮುನಿಸಿನ ವಾತಾವರಣ ಇರೋ ಹೊತ್ತಲ್ಲೇ ಲಂಕಾ ಅಧ್ಯಕ್ಷರು ಈ ರೀತಿ ಹೇಳಿರೋದು ತುಂಬಾ ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply