ಶ್ರೀಲಂಕಾ: ಮುಕ್ಕಾಲು ಕೆಜಿ ಕಿಡ್ನಿ ಕಲ್ಲು, ವಿಶ್ವ ದಾಖಲೆ ಬರೆದ ಸೇನಾ ವೈದ್ಯರು

masthmagaa.com:

ವಿಶ್ವದ ಅತಿದೊಡ್ಡ ಕಿಡ್ನಿ ಕಲ್ಲನ್ನ ತೆಗೆಯುವ ಮೂಲಕ ಶ್ರೀಲಂಕಾದ ಸೇನಾ ವೈದ್ಯರು ಗಿನ್ನಿಸ್‌ ದಾಖಲೆ ನಿರ್ಮಿಸಿದ್ದಾರೆ. ಜೂನ್‌ ತಿಂಗಳ ಆರಂಭದಲ್ಲಿ ಶ್ರೀಲಂಕಾ ರಾಜಧಾನಿ ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ, 13.373 ಸೆಂಟಿ ಮೀಟರ್‌ಗೂ ಹೆಚ್ಚು ಉದ್ದದ ಕಿಡ್ನಿ ಸ್ಟೋನ್‌ನ್ನ ಹೊರಗೆ ತೆಗೆದಿದ್ದಾರೆ. ಈ ಕಲ್ಲು ಬರೋಬ್ಬರಿ 801 ಗ್ರಾಂ ತೂಕವಿತ್ತು ಅಂತ ಸೇನೆ ತಿಳಿಸಿದೆ. ಈ ಮೂಲಕ 2004ರಲ್ಲಿ ಭಾರತೀಯ ವೈದ್ಯರ ಹೆಸರಿನಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಅಂದ್ಹಾಗೆ 2004ರಲ್ಲಿ ಭಾರತೀಯ ವೈದ್ಯರು 13 ಸೆಂಟಿ ಮೀಟರ್‌ ಉದ್ದದ ಕಿಡ್ನಿ ಕಲ್ಲನ್ನ ಹೊರಗೆ ತೆಗೆದಿದ್ರು.

-masthmagaa.com

Contact Us for Advertisement

Leave a Reply