ಚೈತ್ರ ಕುಂದಾಪುರ ನಿರ್ದೋಷಿ: ಪ್ರಮೋದ್‌ ಮುತಾಲಿಕ್‌

masthmagaa.com:

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಪೊಲೀಸರ ವಶದಲ್ಲಿರುವ ಚೈತ್ರ ಕುಂದಾಪುರ ಕೇಸ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. ನಾವು ಯಾರೂ ಚೈತ್ರ ಅವರನ್ನು ಬೆಂಬಲಿಸಿಲ್ಲ ಅಥವಾ ರಕ್ಷಿಸುವ ಪ್ರಯತ್ನ ಮಾಡಿಲ್ಲ. ಬಿಜೆಪಿಯಲ್ಲಿ ಪಕ್ಷದ ಟಿಕೆಟ್‌ಗಳನ್ನು ಅಭ್ಯರ್ಥಿಗಳಿಗೆ ಮಾರಟ ಮಾಡೋದಿಲ್ಲ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು. ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರ ಹೆಸರನ್ನು ದುರುಪಯೋಗ ಮಾಡಿಕೊಂಡವರಿಗೆ ಹಾಗೂ ವಂಚನೆ ಮಾಡಿದವರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರಿಗೆ ಶಿಕ್ಷೆಯಾಗಬೇಕು ಅಂತ ಹೇಳಿದ್ದಾರೆ. ಇದೇ ವೇಳೆ ನೂರಾರು ಜನರು ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ. ಚೈತ್ರ ಕೂಡ ನನ್ನ ಜೊತೆ ಫೋಟೊ ತೆಗೆಸಿಕೊಂಡಿರಬಹುದು. ಚೈತ್ರಾ ಜೊತೆಗೆ ನನ್ನ ಸಂಪರ್ಕವಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇತ್ತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವ್ರು ಆರೋಪಿ ಚೈತ್ರಾ ಪರವಾಗಿ ಮಾತನಾಡಿದ್ದಾರೆ. ಎಲ್ಲೋ ಒಂದು ಕಡೆ ಷಡ್ಯಂತ್ರ ನಡೆದಿದ್ದು, ಚೈತ್ರ ಷಡ್ಯಂತ್ರಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಅಂತ ಆರೋಪಿಸಿದ್ದಾರೆ. ಇನ್ನು ಚೈತ್ರ ನಿರ್ದೋಷಿಯಾಗಿ ಹೊರಬರುತ್ತಾರೆ. ಅಲ್ದೆ ಹಾಲಪ್ಪಜ್ಜ ಸ್ವಾಮೀಜಿಯವರ ಹೆಸರೂ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಈ ಸ್ವಾಮೀಜಿಯನ್ನ ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರದ್ದು ದೊಡ್ಡ ಮಠ. ಅವರೂ ನಿರ್ದೋಷಿಯಾಗಿ ಹೊರ ಬರುತ್ತಾರೆ. ಇನ್ನೊಂದ್‌ ಕಡೆ ಚೈತ್ರ ಅಂಡ್‌ ಗ್ಯಾಂಗ್‌ನಿಂದ ಮೋಸ ಹೋಗಿರುವ ಗೋವಿಂದ ಪೂಜಾರಿ ಅವ್ರು ಗೌರಿ ಗದ್ದೆಯ ವಿನಯ್‌ ಗುರೂಜಿ ಕುರಿತು ಮಾತಾಡಿರುವ ಆಡಿಯೋ ಒಂದು ವೈರಲ್‌ ಆಗಿದೆ. ವಿನಯ್‌ ಗುರೂಜಿ ಆಪ್ತರ ಜೊತೆಯಲ್ಲಿ ಮಾತಾಡುವಾಗ, ಚೈತ್ರ ಬಗ್ಗೆ ಎಚ್ಚರಿಕೆಯಿಂದ ಇರಲು ಹೇಳಿ. ನನಗೆ ಅವಳಿಂದ ದೊಡ್ಡ ಮೋಸ ಆಗಿದೆ ಅಂತ ಹೇಳಿರೋದು ರೆಕಾರ್ಡ್‌ ಆಗಿದೆ. ಅಂದ್ಹಾಗೆ ಕಾರ್ಯಕ್ರಮವೊಂದ್ರಲ್ಲಿ ಚೈತ್ರ, ವಿನಯ್‌ ಗುರೂಜಿ ಹಾಗೂ ಹಾಲಶ್ರಿ ಸ್ವಾಮೀಜಿ ಭಾಗಿಯಾಗಿದ್ದು, ಈ ವೇಳೆ ಚೈತ್ರರನ್ನ ದೇವಿ, ದುರ್ಗೆ ಅಂತೆಲ್ಲಾ ವಿನಯ್‌ ಹೊಗಳಿದ್ದರು. ಈ ಹಿನ್ನಲೆಯಲ್ಲಿ ವಿನಯ್‌ ಅವರ ಹೆಸರನ್ನೂ ಚೈತ್ರ ಬಳಸಿಕೊಳ್ಳುವ ಸಾಧ್ಯತೆಯಿದೆ ಅಂತ ಮೋಸ ಹೋದ ಬಳಿಕ ಗೋವಿಂದ ಎಚ್ಚರಿಸಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply