ಕಾರ್‌ ರೇಸಿಂಗ್‌ ಈವೆಂಟ್ ವೇಳೆ ಅಪಘಾತ: ಕನಿಷ್ಠ 7 ಸಾವು, 23 ಜನರಿಗೆ ಗಾಯ!

masthmagaa.com:

ಶ್ರೀಲಂಕಾದಲ್ಲಿ ಮೋಟಾರ್‌ ಕಾರ್‌ ರೇಸಿಂಗ್‌ ಈವೆಂಟ್‌ನಲ್ಲಿ ಅಪಘಾತ ಉಂಟಾದ ಪರಿಣಾಮ ಕನಿಷ್ಠ 7 ಜನ ಪ್ರಾಣ ಕಳ್ಕೊಂಡಿದ್ದಾರೆ. ಉವಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಒಂದು ಮಗು ಕೂಡ ಸೇರಿದೆ, ಘಟನೆಯಲ್ಲಿ 23 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫರ್ಧೆಯಲ್ಲಿ ಭಾಗಿಯಾಗಿದ್ದ ಕಾರ್‌ವೊಂದು ನಿಯಂತ್ರಣ ತಪ್ಪಿ ಪ್ರೇಕ್ಷಕರ ಮೇಲೆ ಹಾಯ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾರೆ ಅಂತ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply