ಕ್ರಿಸ್ಮಸ್‌ ಪ್ರಯುಕ್ತ ಶ್ರೀಲಂಕಾದ ಕೈದಿಗಳಿಗೆ ಬಂಪರ್‌ ಕೊಡುಗೆ!

masthmagaa.com:

ಕ್ರಿಸ್ಮಸ್‌ ಹಬ್ಬದ ಅಂಗವಾಗಿ ಶ್ರೀಲಂಕಾ ಸರ್ಕಾರ ಜೈಲಿನಲ್ಲಿದ್ದ 1004 ಕೈದಿಗಳನ್ನ ಬಿಡುಗಡೆ ಮಾಡಿದೆ. ಹೌದು, ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಶ್ರೀಲಂಕಾ ಜೈಲಿನಲ್ಲಿರೋ 1004 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಹಾಗೂ ಅವ್ರನ್ನ ಬಂಧನ ಮುಕ್ತಗೊಳಿಸಿದ್ದಾರೆ ಅಂತ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಈ 1004 ಕೈದಿಗಳು ಸರ್ಕಾರ ವಿಧಿಸಿದ್ದ ಫೈನ್‌ಗಳನ್ನ ಕಟ್ಟೋಕಾಗ್ದೇ ಜೈಲು ಸೇರಿದ್ರು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply