ನಮ್ಮ ತಂದೆ ಬರೆದಿರುವ RSS ಕಥೆ ಓದಿ ಅತ್ತುಬಿಟ್ಟೆ ಎಂದ ರಾಜಮೌಳಿ!

masthmagaa.com:

ಖ್ಯಾತ ನಿರ್ದೇಶಕ ರಾಜಮೌಳಿ ಅವ್ರ ತಂದೆ, ಟಾಲಿವುಡ್‌ನ ಖ್ಯಾತ ಚಿತ್ರಕಥೆ ಬರಹಗಾರ ವಿಜಯೇಂದ್ರ ಪ್ರಸಾದ್‌ ಅವ್ರು ಸದ್ಯಕ್ಕೆ RSS ಕುರಿತ ಸ್ಕ್ರಿಪ್ಟ್‌ ಬರಿತಿದಾರೆ ಅಂತ ರಾಜಮೌಳಿ ಹೇಳಿದ್ದಾರೆ. ನನಗೆ RSS ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆದ್ರೆ ಸಂಸ್ಥೆ ಬಗ್ಗೆ ಕೇಳಿದ್ದೇನೆ. ಅದು ಹೇಗೆ ರಚನೆಯಾಯ್ತು? ಅದ್ರ ನಂಬಿಕೆಗಳೇನು ನನಗೆ ಗೊತ್ತಿಲ್ಲ..ಆದ್ರೆ ನನ್ನ ತಂದೆ ಬರೆದಿರೋ ಸ್ಕ್ರಿಪ್ಟ್‌ ಓದಿದ್ದೇನೆ ಕಥೆ ಮಾತ್ರ ತುಂಬಾ ಎಮೋಷನಲ್‌ ಆಗಿದೆ.. ಓದುವಾಗ ತುಂಬಾ ಸಲ ಅತ್ತಿದ್ದೇನೆ ಅಂತ ಇಂಟರ್‌ವ್ಯೂ ಒಂದ್ರಲ್ಲಿ ರಾಜಮೌಳಿ ಹೇಳಿದ್ದಾರೆ. ಆದ್ರೆ ಈ ಚಿತ್ರವನ್ನ ನಾನೇ ಡೈರೆಕ್ಟ್‌ ಮಾಡ್ತೀನಿ ಅಂತ ಹೇಳೋಕೆ ಆಗಲ್ಲ. ನಮ್ಮ ತಂದೆ ಈ ಸ್ಕ್ರಿಪ್ಟ್‌ನ್ನ ಬೇರೆ ಯಾವುದಾದ್ರು ಸಂಸ್ಥೆ ಅಥ್ವಾ ನಿರ್ಮಾಪಕರಿಗೆ ಬರೆದಿದ್ದಾರಾ ಅಂತ ನನಗೆ ಗೊತ್ತಿಲ್ಲ. ಸೋ ಈಗಲೇ ಏನೂ ಹೇಳೋಕೆ ಆಗಲ್ಲ..ಜೊತೆಗೆ ಈ ಕಥೆ ಪಾಸಿಟಿವ್‌ ಅಥ್ವಾ ನೆಗೆಟಿವ್‌ ಪರಿಣಾಮ ಬೀರುತ್ತೆ ಅಂತ ಖಚಿತವಾಗಿ ಏನೂ ಹೇಳೋಕೆ ಆಗಲ್ಲ ಅಂತ ರಾಜಮೌಳಿ ಹೇಳಿದ್ದಾರೆ. ಅಂದಹಾಗೆ ಈ ರಾಜಮೌಳಿಯವರು ನಿರ್ದೇಶನ ಮಾಡಿರುವ RRR, ಬಾಹುಬಲಿ ಅನ್ನೋ ಚಿತ್ರಕಥೆಗಳನ್ನ ಬರೆದು ವಿಜಯೇಂದ್ರ ಪ್ರಸಾದ್‌ ಅವ್ರು ಹೊಸ ಮೈಲಿಗಲ್ಲನ್ನೇ ಸೃಷ್ಟಿ ಮಾಡಿದ್ದಾರೆ. ಇದೀಗ ಆರೆಸ್ಸೆಸ್‌ ಅನ್ನೋ ಸಂಘಟನೆಯೊಂದರ ಕುರಿತು ಸಿನಿಮಾ ಮಾಡ್ತಿರೋದು ಈಗ ತೀವ್ರ ಕುತೂಹಲ ಕೆರಳಿಸಿದೆ. ಯಾಕಂದ್ರೆ ಆರೆಸ್ಸೆಸ್‌ . ಅತ್ಯಂತ ಹಳೆಯ ಸಂಘಟನೆ. ದೇಶದಲ್ಲಿ ದಿನದಿನವೂ ಪ್ರಬಲವಾಗಿ ಬೆಳೀತಾ ಇರೋ ಸಂಘಟನೆ. ಇತ್ತೀಚಿಗಂತೂ ದೇಶದ ರಾಜಕಾರಣದಲ್ಲಿ ಆರೆಸ್ಸೆಸ್‌ ಇಲ್ಲದ ಹೆಸರನ್ನ ಕೂಡ ಊಹಿಸೋಕೂ ಸಾಧ್ಯವಿಲ್ಲ. ದೇಶದಲ್ಲಿ ಬಹುಮತದ ಮೂಲಕ ಎರಡು ಬಾರಿ ಅಧಿಕಾರ ಹಿಡಿದಿರುವ ಬಿಜೆಪಿ ಅನ್ನೋ ದೊಡ್ಡ ರಾಜಕೀಯ ಪಕ್ಷವೊಂದರ ಮಾತೃ ಸಂಘಟನೆ ಅಂತ ಆರೆಸ್ಸೆಸ್‌ನ್ನ ಕರೆಯಲಾಗುತ್ತೆ. ಈ ಕಾರಣದಿಂದಲೇ ದೊಡ್ಡ ಮಟ್ಟದ ಪರ ವಿರೋಧದ ಅಭಿಪ್ರಾಯಕ್ಕೂ ಈ ಸಂಘಟನೆ ಒಳಗಾಗಿದೆ. ಸೈಧ್ದಾಂತಿಕವಾಗಿ ಅಗಾಧ ಪ್ರಮಾಣದಲ್ಲಿ ಈ ಸಂಘಟನೆಗೆ ಬೆಂಬಲಿಗರು ಇದ್ದಾರೆ. ಅದೇ ಸಿದ್ದಾಂತದ ಕಾರಣ ಕೊಟ್ಟು ಇದನ್ನ ವಿರೋಧಿಸುವವರೂ ಇದ್ದಾರೆ. ಇಂತಹ ಹೊತ್ತಲ್ಲಿ ಸಾಮಾಜಿಕವಾಗಿ ತುಂಬಾ ಪ್ರಭಾವ ಬೀರಬಹುದಾದ ಸಿನಿಮಾ ಅನ್ನೋ ಜನಪ್ರಿಯ ಮಾಧ್ಯಮದ ಮೂಲಕ ಆರೆಸ್ಸೆಸ್‌ ಕಥೆ ಬರ್ತಿರೋದು ನಿಜಕ್ಕೂ ದೊಡ್ಡ ಸಂಚಲನ ಹುಟ್ಟಿಸಿದೆ. ಯಾಕಂದ್ರೆ ಸಿನಿಮಾ ಕ್ಷೇತ್ರ ಅನ್ನೋದು ಇತ್ತೀಚಿಗೆ ಜನರ ಆಯ್ಕೆಯ ವಸ್ತುವಾಗಿ ವಿಚಾರದ ವಸ್ತುವಾಗಿ ಯಾವ ರೂಪದಲ್ಲಿ ಬದಲಾಗ್ತಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಮನರಂಜನೆಗೋಸ್ಕರ ಸಿನಿಮಾ ನೋಡೋ ಕಾಲ ಯಾವತ್ತೋ ಮರೆಯಾಗ್ಬಿಟ್ಟಿದೆ. ಹೀಗಿರೋವಾಗ ಆರೆಸ್ಸೆಸ್‌ ಬಗ್ಗೆ ಸಿನಿಮಾ ಮಾಡ್ತಿರೋದ್ರ ಜೊತೆಗೆ ಈ ಕಥೆ ಕೇಳಿ ನನಗೆ ಅಳು ಬಂದಿದೆ ಅಂತ ರಾಜಮೌಳಿ ಹೇಳಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply