CBIಗೆ ನೀಡಿದ್ದ ಸಾಮಾನ್ಯ ಸಮ್ಮತಿ ಹಿಂಪಡೆದ ತಮಿಳುನಾಡು! ಯಾಕೆ?

masthmagaa.com:

ರಾಜ್ಯದಲ್ಲಿ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳ (CBI)ಗೆ ನೀಡಿದ್ದ general consent ಅಥ್ವಾ ಸಾಮಾನ್ಯ ಸಮ್ಮತಿಯನ್ನ ತಮಿಳುನಾಡು ಸರ್ಕಾರ ಹಿಂಪಡೆದಿದೆ. ಅಲ್ಲಿನ ವಿದ್ಯುತ್‌ ಹಾಗೂ ಅಬಕಾರಿ ಸಚಿವ ವಿ ಸೆಂಥಿಲ್‌ ಬಾಲಾಜಿ ಅವ್ರನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಬಂಧಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಮೂಲಕ ಸಿಬಿಐ ತಮಿಳುನಾಡಿಗೆ ತನಿಖೆ ನಡೆಸಲು ಹೋಗುವ ಮೊದಲು ಸಂಬಂಧಪಟ್ಟ ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು ಅಂತ ಗೃಹ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ನೆಕ್ಸ್ಟ್‌ ತಾವೇ ಅಂತ ಸಿಎಂ ಎಂಕೆ ಸ್ಟಾಲಿನ್‌ ಹೆದರಿ ಈ ಕ್ರಮ ತೆಗೆದುಕೊಂಡಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ. ಅಂದ್ಹಾಗೆ ಪಶ್ಚಿಮ ಬಂಗಾಳ, ರಾಜಸ್ಥಾನ, ಕೇರಳ, ಮಿಜೋರಾಂ, ಪಂಜಾಬ್ ಮತ್ತು ತೆಲಂಗಾಣ ಈಗಾಗಲೇ ಇದೇ ರೀತಿಯ ಆದೇಶವನ್ನು ಹೊರಡಿಸಿವೆ.

-masthmagaa.com

Contact Us for Advertisement

Leave a Reply