ಮದುವೆಗಳಿಗೆ ನೋಂದಣಿ ಕಡ್ಡಾಯ: ಭಾರತೀಯ ಕಾನೂನು ಆಯೋಗ!

masthmagaa.com:

ಭಾರತೀಯರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಕಾನೂನು ಆಯೋಗ ಮಹತ್ವದ ಶಿಫಾರಸ್ಸು ಹೊರಡಿಸಿದೆ. ಅನಿವಾಸಿ ಮತ್ತು ನಿವಾಸಿ ಭಾರತೀಯರ ಮದುವೆ ಬಗ್ಗೆ ಕಡ್ಡಾಯವಾಗಿ ನೋಂದಣಿ ಮಾಡ್ಬೇಕು ಅಂತ ಆಯೋಗ ಶಿಫಾರಸ್ಸು ಮಾಡಿದೆ. ಭಾರತದ ಪ್ರಜೆಗಳ ಜೊತೆ ವಿದೇಶದಲ್ಲಿರೋ ಭಾರತೀಯರ ಮದುವೆಗಳಿಗೆ ಈ ಕಾನೂನು ಅಪ್ಲೈ ಆಗಲಿದೆ ಅಂತ ಸ್ಪಷ್ಟಪಡಿಸಿದೆ. ಜೊತೆಗೆ ಈ ಮದುವೆ ವಿಚಾರವಾಗಿ ವಿಚ್ಛೇದನೆ, ನಿರ್ವಹಣೆ, ಪಾಲನೆ ಸಂಬಂಧಿಸಿದಂತೆ ಈ ಕಾನೂನು ವ್ಯಾಪ್ತಿಗೆ ಬರೋರಿಗೆ ಸಮನ್ಸ್‌ ನೀಡ್ಬೇಕು ಅಂತೇಳಿದೆ. ಅಂದ್ಹಾಗೆ ಅನಿವಾಸಿ ಹಾಗೂ ನಿವಾಸಿ ಭಾರತೀಯರ ಮದುವೆಗಳ ಸುಳ್ಳು ಮಾಹಿತಿಗೆ ಬ್ರೇಕ್‌ ಹಾಕಲು ಈ ಕ್ರಮ ಕೈಗೊ‍ಳ್ಳಲಾಗಿದೆ ಅಂತ ಆಯೋಗ ತಿಳಿಸಿದೆ.

-masthmagaa.com

Contact Us for Advertisement

Leave a Reply