ದೆಹಲಿ, ಪಂಜಾಬ್‌, ಹರಿಯಾಣದಲ್ಲಿ ಇಳಿಕೆಯಾದ ʻಸ್ಟಬಲ್‌ ಬರ್ನಿಂಗ್‌ʼ!

masthmagaa.com:

ದೆಹಲಿ, ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸ್ಟಬಲ್‌ ಬರ್ನಿಂಗ್‌ ಅಂದ್ರೆ ಕೃಷಿ ತ್ಯಾಜ್ಯ ಸುಡುವ ಘಟನೆಗಳು ಗಣನೀಯವಾಗಿ ಕಡಿಮೆಯಾಗಿವೆ. 2022ರ ಸೆಪ್ಟೆಂಬರ್‌ 15 ರಿಂದ ಅಕ್ಟೋಬರ್‌ 29 ರವರೆಗಿನ ಅವಧಿಯಲ್ಲಿ ಒಟ್ಟು 13,964 ಸ್ಟಬಲ್‌ ಬರ್ನಿಂಗ್‌ ಘಟನೆಗಳು ವರದಿಯಾಗಿವೆ. ಆದ್ರೆ ಈ ವರ್ಷ 6,391 ಘಟನೆಗಳು ನಡೆದಿವೆ ಅಂತ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ತಿಳಿಸಿದೆ. ಸ್ಟಬಲ್‌ ಬರ್ನಿಂಗ್‌ ಕುರಿತು ದಿನನಿತ್ಯ ಬಿಡದೇ ಪರಿಶೀಲನೆ ನಡೆಸಿ ಮಾನಿಟರ್‌ ಮಾಡೋದ್ರಿಂದ ಈ ಘಟನೆಗಳು ಕಡಿಮೆಯಾಗಿವೆ ಅಂತ ಕೇಂದ್ರ ಹೇಳಿದೆ. ಅಂದ್ಹಾಗೆ ಪದೇ ಪದೇ ಕಳಪೆ ಗಾಳಿ ಗುಣಮಟ್ಟವನ್ನ ದಾಖಲಿಸ್ತಾ ಇರೋ ದೆಹಲಿಯ ವಾಯು ಮಾಲಿನ್ಯದಲ್ಲಿ ಸ್ಟಬಲ್‌ ಬರ್ನಿಂಗ್‌ ಪಾತ್ರ ಪ್ರಮುಖವಾಗಿದೆ. ಆದ್ರಿಂದ ಸ್ಟಬಲ್‌ ಬರ್ನಿಂಗ್‌ ಕಡಿಮೆಯಾಗೋದ್ರಿಂದ ದೆಹಲಿಯ ಗಾಳಿ ಗುಣಮಟ್ಟದಲ್ಲಿ ಸುಧಾರಣೆ ಕಾಣಬಹುದಾಗಿದೆ.

-masthmagaa.com

Contact Us for Advertisement

Leave a Reply