140 ಭಾಷೆಗಳಲ್ಲಿ ಹಾಡಿ ಗಿನ್ನಿಸ್‌ ದಾಖಲೆ ಮಾಡಿದ ಕೇರಳದ ಹುಡುಗಿ!

masthmagaa.com:

9 ಗಂಟೆಗಳ ಕನ್ಸರ್ಟ್‌ ಒಂದ್ರಲಿ ಬರೋಬ್ಬರಿ 140 ಭಾಷೆಗಳಲ್ಲಿ ಹಾಡಿ 18 ವರ್ಷದ ಕೇರಳ ಮೂಲದ ಗಾಯಕಿ ಸುಚೇತಾ ಸತೀಶ್‌ ಗಿನ್ನಿಸ್‌ ದಾಖಲೆ ಮಾಡಿದ್ದಾರೆ. ನವೆಂಬರ್‌ 30 ರಿಂದ ಡಿಸೆಂಬರ್‌ 12 ರವರೆಗೆ ದುಬೈನಲ್ಲಿ ನಡೆದ ʻಕನ್ಸರ್ಟ್‌ ಫಾರ್‌ ಕ್ಲೈಮೇಟ್‌ʼ ಕಾರ್ಯಕ್ರಮದಲ್ಲಿ ಹಾಡಿ ಈ ಹೊಸ ಗಿನ್ನಿಸ್‌ ದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ 2021ರಲ್ಲಿ ಇವ್ರು 120 ಭಾಷೆಗಳಲ್ಲಿ ಹಾಡಿ ಗಿನ್ನಿಸ್‌ ದಾಖಲೆ ಮಾಡಿದ್ರು. ನಂತರ 121 ಭಾಷೆಗಳಲ್ಲಿ ಹಾಡಿದ್ದ ಪುಣೆ ಮೂಲದ ಗಾಯಕಿ ಮಂಜುಶ್ರೀ ಓಕ್‌ ಅವ್ರ ರೆಕಾರ್ಡ್‌ನ್ನ ಬ್ರೇಕ್‌ ಮಾಡಿ ಮತ್ತೊಮ್ಮೆ ಹೊಸ ದಾಖಲೆ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply