ವಿಶ್ವಕಪ್‌ ಬಾಲ್‌ ಕಾಂಟ್ರವರ್ಸಿ: ಪಾಕ್‌ ಮಾಜಿ ಕ್ರಿಕೆಟರ್‌ಗೆ ಬುದ್ದಿ ಹೇಳಿದ ಶಮಿ

masthmagaa.com:

ವಿಶ್ವಕಪ್‌ನಲ್ಲಿ ಭಾರತದ ಬೌಲರ್‌ಗಳಿಗೆ ಬೇರೆ ಅಥ್ವಾ ಡಿಫರೆಂಟ್‌ ಬಾಲ್‌ ಕೊಡಲಾಗ್ತಿದೆ ಅಂತ ಆರೋಪಿಸಿದ್ದ ಪಾಕ್‌ ಮಾಜಿ ಬ್ಯಾಟರ್‌ ಹಸನ್‌ ರಾಜಾಗೆ ಇಂಡಿಯನ್‌ ಬೌಲರ್‌ ಮೊಹಮ್ಮದ್‌ ಶಮಿ ತಿರುಗೇಟು ಕೊಟ್ಟಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಮಾತನಾಡಿರೊ ಶಮಿ “ವಿಶ್ವಕಪ್‌ ಆರಂಭಿಕ ಪಂದ್ಯಗಳಲ್ಲಿ ನಾನು ಆಡ್ಲಿಲ್ಲ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಿಂದ ತಂಡಕ್ಕೆ ಬಂದೆ.‌ ಆಡಿದ ಮೊದಲ ಮೂರು ಪಂದ್ಯಗಳಲ್ಲಿ 14 ವಿಕೆಟ್‌ಗಳು ಬಿದ್ವು. ಕೆಲವು ಪಾಕ್‌ ಪ್ಲೇಯರ್‌ಗಳಿಗೆ ಇದನ್ನ ಸಹಿಸೋಕೆ ಆಗಿಲ್ಲ. ಅವ್ರು ತಾವೇ ಬೆಸ್ಟ್‌ ಅಂದುಕೊಂಡಿದ್ದಾರೆ. ನೀವು ಇನ್ನೊಬ್ಬ ಆಟಗಾರನ ಯಶಸ್ಸನ್ನ ಎಂಜಾಯ್‌ ಮಾಡಲು ಕಲಿತಾಗ ಮಾತ್ರ ಒಳ್ಳೆಯ ಆಟಗಾರ ಆಗ್ತೀರಿ. ಆದ್ರೆ ನೀವು ʻಅವ್ರಿಗೆ ಬೇರೆ ಕಂಪನಿ ಬಾಲ್‌ ಕೊಡ್ತೀರಿ.. ಬೇರೆ ಕಲರ್‌ ಬಾಲ್‌ ಕೊಡ್ತಿದ್ದೀರಿʼ ಅಂತ ಕಾಂಟ್ರೊವರ್ಸಿ ಮಾಡೋದಕ್ಕೆ ಕಾಯ್ತಾ ಇರ್ತೀರಿ. “Sudhar jao yaar”… ಒಂಚೂರು ಒಳ್ಳೆ ಬುದ್ದಿ ಕಲೀರಿ” ಅಂತ ಶಮಿ ಕ್ಲಾಸ್‌ ತಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply