ಮಂಡ್ಯ ಮಹಾಯುದ್ದದಿಂದ ಹಿಂದೆ ಸರಿದ ಸುಮಲತಾ: HDKಗೆ ಬೆಂಬಲ!

masthmagaa.com:

ಈ ಬಾರಿ ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲ್ಲ ಅಂತ ಸಂಸದೆ ಸುಮಲತಾ ಅಂಬರೀಷ್‌ ಸ್ಪಷ್ಟ ಪಡಿಸಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ಲ್ಯಾನ್‌ ಮಾಡಿದ್ದ ಸುಮಲತಾ ಅವ್ರಿಗೆ ಟಿಕೆಟ್‌ ಮಿಸ್‌ ಆಗಿತ್ತು. ಹೀಗಾಗಿ ಬೆಂಬಲಿಗರ ಸಭೆ ಕರೆದಿದ್ದ ಸುಮಲತಾ, ಇಂದು ತಮ್ಮ ನಿರ್ಧಾರ ಪ್ರಕಟಿಸಿ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ, HD ಕುಮಾರಸ್ವಾಮಿ ಅವ್ರಿಗೆ ತಮ್ಮ ಬೆಂಬಲ ನೀಡೊದಾಗಿ ಹೇಳಿದ್ದಾರೆ. ಅಲ್ದೇ ತಾನು ಬಿಜೆಪಿ ಪಕ್ಷ ಸೇರ್ಪಡೆಯಾಗ್ತೀನಿ ಅಂತೇಳಿದ್ದಾರೆ. ನನಗೆ ಬಿಜೆಪಿ ಮಂಡ್ಯ ಬದಲಿಗೆ ಬೇರೆ ಕ್ಷೇತ್ರದಲ್ಲಿ ನಿಲ್ಲುವಂತೆ ಕೆಲ ಕ್ಷೇತ್ರಗಳ ಆಯ್ಕೆ ನೀಡಿತ್ತು. ಆದ್ರೆ ನಾನು ಗೆದ್ರು, ಸೋತ್ರು ಮಂಡ್ಯದಲ್ಲೆ. ಹೀಗಾಗಿ ನಾನು ಸ್ವಾರ್ಥ ರಾಜಕಾರಣಿ ಅಲ್ಲ, ಬೇರೆಡೆ ಸ್ಪರ್ಧೆ ಮಾಡೋದಿಲ್ಲ ಅಂತ ಸುಮಲತಾ ಹೇಳಿದ್ದಾರೆ. ಅಲ್ದೇ ಕಳೆದ ಅವಧಿಯಲ್ಲಿ ಪಕ್ಷೇತರನಾಗಿ ಗೆದ್ದಿದ್ದ ನನಗೆ ಬಿಜೆಪಿ ಸರ್ಕಾರ ಮಂಡ್ಯ ಅಭಿವೃದ್ದಿಗೆ 4 ಸಾವಿರ ಕೋಟಿ ರೂಪಾಯಿ ನೆರವು ನೀಡಿತ್ತು ಅಂತ ಸುಮಲತಾ ತಿಳಿಸಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿರೊ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸುಮಲತಾ ದೇಶದ ಹಿತದೃಷ್ಠಿಯಿಂದ ಎಲ್ಲರೂ ಒಪ್ಪುವಂತಹ ನಿರ್ಣಯ ತಗೊಂಡಿದ್ದಾರೆ. ಅವ್ರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡ್ಬೇಕು ಅಂತ ಪಕ್ಷದ ನಾಯಕರಿಗೆ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply