ಕಮಲದ ಮೇಲೆ ಸುಮಲತಾ ಒಲವು! ಬಿಜೆಪಿಗೆ ಹಾರಲಿದ್ದಾರಾ ಹುಚ್ಚೇಗೌಡರ ಸೊಸೆ?

masthmagaa.com:

ಚುನಾವಣೆ ಸಂದರ್ಭದಲ್ಲೇ ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೀತಾ ಇವೆ. ಇದೀಗ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರೋದು ಬಹುತೇಕ ಪಕ್ಕಾ ಅಂತ ಹೇಳಲಾಗ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಸುಮಲತಾ ಅಂತಿಮ ಸಿದ್ದತೆ ನಡೆಸಿದ್ದು ಬಿಜೆಪಿ ಹೈಕಮಾಂಡ್‌ ಜೊತೆಗೂ ಮಾತನಾಡಿದ್ದಾರೆ ಅಂತ ಸುದ್ದಿಯಾಗಿದೆ. ಈ ನಡುವೆ ಜೆಡಿಎಸ್‌ ಶಾಸಕ ಪುಟ್ಟರಾಜು ಮಾತನಾಡಿ, ಸುಮಲತಾ ಅವರು ನಾಳೆಯೇ ಬಿಜೆಪಿ ಸೇರುವ ಬಗ್ಗೆ ಮಾಹಿತಿ ಇದೆ. ಮೋದಿ ಮಂಡ್ಯಕ್ಕೆ ಬರುತ್ತಿರೋ ಸಂದರ್ಭದಲ್ಲೇ ಸುಮಲತಾ ಬಿಜೆಪಿಗೆ ಸೇರಬೇಕಿತ್ತು. ಆದ್ರೆ ಸರ್ಕಾರಿ ಕಾರ್ಯಕ್ರಮ ಅಂತ ಅದನ್ನ ಮುಂದೂಡಲಾಗಿದೆ ಅಂತ ಹೇಳಿದ್ದಾರೆ. ಆದ್ರೆ ಪಕ್ಷ ಸೇರುವ ಕುರಿತು ಸುಮಲತಾ ಅವರಿಂದ ಇದುವರೆಗೂ ಈ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

-masthmagaa.com

Contact Us for Advertisement

Leave a Reply