ಪತಂಜಲಿಗೆ ಸುಪ್ರೀಂ ಕೋರ್ಟ್‌ ಶಾಕ್:‌ ಆಡ್‌ಗಳಿಗೆ ಬ್ರೇಕ್‌

masthmagaa.com:

ಯೋಗಗುರು ಬಾಬಾ ರಾಮ್‌ದೇವ್‌ರ ಪತಂಜಲಿ ಆಯುರ್ವೇದ ವಿಚಾರವಾಗಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನ ತರಾಟೆಗೆ ತಗೊಂಡಿದೆ. ಪತಂಜಲಿಯ ದಾರಿತಪ್ಪಿಸೋ ಜಾಹಿರಾತುಗಳ ಮೇಲೆ ಸರ್ಕಾರ ಯಾವುದೇ ಕ್ರಮ ತಗೊಳ್ದೆ ಸುಮ್ಮನಿದೆ ಅಂತ ಕೋರ್ಟ್‌ ಮಂಗಳಾರತಿ ಮಾಡಿದೆ. ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌(IMA), ಪತಂಜಲಿ ತನ್ನ ಅಡ್ವರ್ಟೈಸ್‌ಗಳಲ್ಲಿ ಬೇರೆ ಮೆಡಿಕಲ್‌ ಸಿಸ್ಟಮ್‌ಗಳ ವಿರುದ್ಧದ ಅಜೆಂಡಾವನ್ನ ಸ್ಪ್ರೆಡ್‌ ಮಾಡ್ತಿದೆ ಅಂತ ದೂರು ಸಲ್ಲಿಸಿತ್ತು. ಇದೀಗ ವಿಚಾರಣೆ ನಡೆಸಿದ ಕೋರ್ಟ್‌, ಪತಂಜಲಿಯ ಮೆಡಿಸನ್‌ ಆ್ಯಡ್‌ಗಳ ಮೇಲೆ ತಾತ್ಕಾಲಿಕ ಬ್ಯಾನ್‌ ಹೇರಿದೆ. ಅಲ್ಲದೆ ಕಂಪನಿಯ ಓನರ್‌ಗಳಾದ ಬಾಬಾ ರಾಮ್‌ದೇವ್‌ ಹಾಗೂ ಆಚಾರ್ಯ ಬಾಲಾಕೃಷ್ಣರಿಗೆ ಶೋಕಾಸ್‌ ನೋಟೀಸ್‌ ನೀಡಿ, ಎರಡು ವಾರದ ಒಳಗೆ ರಿಪ್ಲೈ ಕೊಡಿ ಅಂದಿದೆ. ಕಳೆದ ನವೆಂಬರ್‌ನಲ್ಲೂ ಪತಂಜಲಿಗೆ ಕೋರ್ಟ್‌ ವಾರ್ನಿಂಗ್‌ ನೀಡಿತ್ತು. ಪತಂಜಲಿ ಪ್ರಾಡಕ್ಟ್‌ಗಳು ಖಾಯಿಲೆಗಳನ್ನ ವಾಸಿ ಮಾಡತ್ತೆ ಅಂತ ಸುಳ್ಳು ಜಾಹಿರಾತಿ ಕೊಟ್ರೆ, ಪ್ರತಿ ಪ್ರಾಡಕ್ಟ್‌ ಮೇಲೆ ಒಂದು ಕೋಟಿ ರೂಪಾಯಿ ದಂಡ ಹಾಕ್ಬೇಕಾಗತ್ತೆ ಅಂತ ಎಚ್ಚರಿಸಿತ್ತು. ಇದೀಗ ಸರ್ಕಾರಕ್ಕೂ ಬುದ್ದಿ ಹೇಳಿ ಕಂಪನಿ ಮೇಲೂ ಕಠಿಣ ಕ್ರಮ ತಗೊಂಡಿದೆ.

-masthmagaa.com

Contact Us for Advertisement

Leave a Reply