ರಾಹುಲ್‌ ಸಂಸದ ಸದಸ್ಯತ್ವ ಮಾರುಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಅರ್ಜಿ ರಿಜೆಕ್ಟ್ ಮಾಡಿದ ಸುಪ್ರೀಂಕೋರ್ಟ್‌!‌

masthmagaa.com:

ಕಾಂಗ್ರೆಸ್‌ ನಾಯಕ, ವಯನಾಡು ಎಂಪಿ ರಾಹುಲ್‌ ಗಾಂಧಿಗೆ ಪುನಃ ಲೋಕಸಭೆ ಸದಸ್ಯತ್ವ ನೀಡಿದ್ದರ ವಿರುದ್ಧ ಸಲ್ಲಿಸಿದ್ದ PIL ಅನ್ನು ಸುಪ್ರೀಂ ಕೋರ್ಟ್‌ ರಿಜೆಕ್ಟ್‌ ಮಾಡಿದೆ. ಮೋದಿ ಸರ್‌ನೇಮ್‌ ಕೇಸ್‌ಗೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್‌ನಲ್ಲಿ ರಾಹುಲ್‌ ಲೋಕಸಭೆಯಿಂದ ಡಿಸ್‌ಕ್ವಾಲಿಫೈ ಆಗಿದ್ರು. ಆದ್ರೆ‌ ಆಗಸ್ಟ್‌ನಲ್ಲಿ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಸ್ಟೇ ನೀಡಿದ ನಂತರ ಲೋಕಸಭಾ ಸೆಕ್ರೆಟರಿಯೆಟ್ ರಾಹುಲ್‌ ಸದಸ್ಯತ್ವವನ್ನ ರಿಸ್ಟೋರ್‌ ಮಾಡಿತ್ತು. ಈಗ ಅಶೋಕ್‌ ಪಾಂಡೆ ಎಂಬ ಲಾಯರ್‌ ಒಬ್ರು ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ಗೆ PIL ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಬಿ.ಆರ್‌. ಗವಾಯ್‌ ನೇತೃತ್ವದ ಪೀಠ PIL ಅನ್ನು ರಿಜೆಕ್ಟ್‌ ಮಾಡಿದೆ. ಅಲ್ಲದೇ ಈ ಕೇಸ್‌ನಲ್ಲಿ ಯಾರ ಮೂಲಭೂತ ಹಕ್ಕಿಗೂ ಹಾನಿಯಾಗಿಲ್ಲ ಎಂದು ಹೇಳಿ ಅರ್ಜಿದಾರರಿಗೆ 1 ಲಕ್ಷ ರೂಪಾಯಿ ಫೈನ್‌ ಕೂಡ ಹಾಕಿದೆ. ಅಂದ್ಹಾಗೆ ರಾಹುಲ್‌ 2019 ರಲ್ಲಿ ಕೋಲಾರದಲ್ಲಿ ನಡೆದ ರ‍್ಯಾಲಿ ಒಂದರಲ್ಲಿ ಮಾತನಾಡುವಾಗ ʻಎಲ್ಲಾ ಕಳ್ಳರ ಹೆಸರಿನ ಜೊತೆಗೆ ಈ ಮೋದಿ ಅನ್ನೋ ಸರ್‌ನೇಮ್‌ ಕಾಮನ್‌ ಆಗಿ ಯಾಕಿದೆ?ʼ ಅಂತ ಹೇಳಿ ಟೀಕೆಗೆ ಗುರಿಯಾಗಿದ್ರು. ಈ ವಿಚಾರವಾಗೆ BJPಯ ಪೂರ್ಣೇಶ್ ಮೋದಿ‌ ರಾಹುಲ್‌ ಮೇಲೆ ಕೇಸ್‌ ಹಾಕಿದ್ರು.

-masthmagaa.com

Contact Us for Advertisement

Leave a Reply