ಕೊಲ್ಕತ್ತಾ ಹೈಕೋರ್ಟ್‌ ಜಡ್ಜ್‌ಗಳ ಕಿತ್ತಾಟಕ್ಕೆ ಸುಪ್ರೀಂ ಎಂಟ್ರಿ!

masthmagaa.com:

ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ್, ವಿಭಾಗೀಯ ಪೀಠವೊಂದರ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ರು. ವಿಭಾಗೀಯ ಪೀಠದ ಜಸ್ಟೀಸ್‌ ಸೌಮೆನ್‌ ಸೇನ್‌, ರಾಜ್ಯದ ಪಕ್ಷ ಒಂದಕ್ಕೆ ಫೇವರ್‌ ಆಗೋ ತರ ನಡೆದುಕೊಳ್ತಿದ್ದಾರೆ ಅಂತ ಆರೋಪಿಸಿದ್ರು. ಅಲ್ಲದೆ MBBS ಅಡ್ಮಿಶನ್‌ ಕೇಸ್‌ಗೆ ಸಂಬಂಧಿಸಿದ CBI ತನಿಖೆಗೆ ವಿಭಾಗೀಯ ಕೋರ್ಟ್‌ ನೀಡಿದ್ದ ಸ್ಟೇ ಆರ್ಡರನ್ನ ಜಸ್ಟೀಸ್‌ ಅಭಿಜಿತ್‌ ಖುಲಾಸೆಗೊಳಿಸಿದ್ರು. ಅಲ್ಲದೆ ಸುಪ್ರಿಂ ಕೋರ್ಟ್‌ ಈ ವಿಚಾರದ ಕಡೆ ಗಮನ ಕೊಡ್ಬೇಕು ಅಂದಿದ್ರು. ಈ ಬೆನ್ನಲ್ಲೇ ಈ ಕೇಸ್‌ಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳಿಗೆ ಸುಪ್ರಿಂ ಕೋರ್ಟ್‌ ಸ್ಟೇ ನೀಡಿದೆ.

ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆಯ ಹಗರಣ ಸಂಬಂಧ ಕೊಲ್ಕತ್ತಾ ಹೈಕೋರ್ಟ್‌ ನಡೆಸ್ತಿದ್ದ ಎಲ್ಲಾ ಪ್ರೊಸೀಡಿಂಗ್‌ಗಳನ್ನ ಇದೀಗ ಸುಪ್ರೀಂ ಕೋರ್ಟ್‌ ತಡೆ ಹಿಡಿದಿದೆ. ಅಲ್ದೇ ಸಿಜೆಐ ಡಿವೈ ಚಂದ್ರಚೂಡ್‌ ನೇತೃತ್ವದ 5 ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಪ್ರಕರಣದ ವಿಚಾರಣೆ ನಡೆಸೋಕೆ ಜನವರಿ 29ಕ್ಕೆ ಡೇಟ್‌ ಫಿಕ್ಸ್‌ ಮಾಡಿದೆ. ಅಂದ್ಹಾಗೆ ಈ ಪ್ರಕರಣದ ಸಿಬಿಐ ತನಿಖೆಗೆ ಸಂಬಂಧಿಸಿ ಕೋಲ್ಕತ್ತಾ ಹೈಕೋರ್ಟ್‌ನ ಎರಡು ನ್ಯಾಯಪೀಠಗಳ ಮಧ್ಯೆ ಜನವರಿ 26 ರಂದು ದೊಡ್ಡ ಸಂಘರ್ಷವೇ ನಡೆದಿತ್ತು. ಏಕ ಸದಸ್ಯ ಪೀಠದ ಜಡ್ಜ್‌ ಮತ್ತು ವಿಭಾಗೀಯ ಪೀಠದ ಜಡ್ಜಸ್‌ ನಡುವೆ ನಡೆದ ಕಿತ್ತಾಟ ಸಂಬಂಧ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿವಾದದ ಬಗ್ಗೆ ವಿಶೇಷ ವಿಚಾರಣೆ ನಡೆಸಿದೆ. ನಂತ್ರ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಅವ್ರಿದ್ದ ಏಕಸದಸ್ಯ ಪೀಠ ಮತ್ತು ನ್ಯಾಯಮೂರ್ತಿ ಸೌಮೆನ್‌ ಸೇನ್‌ ನೇತೃತ್ವದ ವಿಭಾಗೀಯ ಪೀಠ ನಡೆಸ್ತಿದ್ದ ಎಲ್ಲಾ ವಿಚಾರಣೆಗಳನ್ನ ತಡೆ ಹಿಡಿದಿದೆ.

-masthmagaa.com

Contact Us for Advertisement

Leave a Reply