ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಕಂಟಿನ್ಯೂ: ಸುಪ್ರೀಂ!

masthmagaa.com:

ವಾರಣಾಸಿಯ ಗ್ಯಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ನಿಲ್ಲಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಅಲ್ದೇ ಮಸೀದಿ ಆವರಣದಲ್ಲಿ ಮುಸ್ಲಿಮರ ನಮಾಜ್‌ ಪ್ರಕ್ರಿಯೆ ಸೇರಿದಂತೆ ಸದ್ಯದ ಎಲ್ಲ ಪ್ರಕ್ರಿಯೆಗಳನ್ನ ಯತಾಸ್ಥಿತಿಯಲ್ಲಿ ಮುಂದುವರೆಸುವಂತೆ ಸುಪ್ರೀಂ ಆದೇಶಿಸಿದೆ. ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅಲಹಾಬಾದ್‌ ಹೈಕೋರ್ಟ್‌ ಅವಕಾಶ ನೀಡಿತ್ತು. ಇದನ್ನ ಪ್ರಶ್ನಿಸಿ ಮುಸ್ಲಿಂ ಪರ ವಕೀಲರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ರು. ಈ ವಿಚಾರವಾಗಿ ಈಗ ಸುಪ್ರೀಂ, ಅರ್ಜಿದಾರರ ಮನವಿಯನ್ನ ತಳ್ಳಿ ಹಾಕಿದೆ. ಅಲ್ದೇ ಈ ಅರ್ಜಿದಾರರ ಮನವಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಾಶಿ ವಿಶ್ವನಾಥ ದೇವಾಲಯದ ಟ್ರಸ್ಟಿಗಳಿಗೆ ಏಪ್ರಿಲ್‌ 30ರವರೆಗೆ ಕಾಲಾವಕಾಶ ನೀಡಿದೆ.

-masthmagaa.com

Contact Us for Advertisement

Leave a Reply