ಚುನಾವಣಾ ಆಯುಕ್ತರ ನೇಮಕಾತಿ ತಡೆ ನಿರಾಕರಿಸಿದ ಸುಪ್ರೀಂ!

masthmagaa.com:

2023ರ ಕಾನೂನು ಅಡಿಯಲ್ಲಿ ನೂತನ ಚುನಾವಣಾ ಆಯುಕ್ತರಾಗಿ ಆಯ್ಕೆಯಾಗಿರೋರ ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನ ಇದೀಗ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಅರ್ಜಿ ವಿಚಾರಣೆ ನಡೆಸಿ, ಚುನಾವಣಾ ಆಯುಕ್ತರ ನೇಮಕಾತಿಯನ್ನ ತಡೆಹಿಡಿಯೋಕೆ ಸಾಧ್ಯವಿಲ್ಲ ಅಂತ ಆದೇಶ ಹೊರಡಿಸಿದೆ. ಜೊತೆಗೆ 2023ರ ಕಾನೂನು ಪ್ರಶ್ನಿಸಿ ಸಲ್ಲಿಸಲಾದ ಇತರೆ ಅರ್ಜಿಗಳ ವಿಚಾರಣೆಯನ್ನ ಮಾರ್ಚ್‌ 21ಕ್ಕೆ ಮುಂದೂಡಲಾಗಿದೆ. ಹೀಗಂತ ಸಂಜೀವ್‌ ಖನ್ನಾ, ದೀಪಂಕರ್‌ ದತ್ತಾ ಮತ್ತು ಆಗಸ್ಟೀನ್‌ ಜಾರ್ಜ್‌ ಮಾಸಿಹ್‌ ಅವ್ರ ನ್ಯಾಯಪೀಠ ಈ ರೀತಿ ಆದೇಶ ನೀಡಿದೆ. ಅಂದ್ಹಾಗೆ 2023ರ ಕಾನೂನು ಜಾರಿಗೆ ಬರೋ ಮೊದಲು ಚುನಾವಣಾ ಆಯುಕ್ತರನ್ನ ಸೆಲೆಕಟ್ಟ್‌ ಮಾಡೋ ಕಮಿಟಿಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಉಪಸ್ಥಿತಿ ಇರಬೇಕಿತ್ತು. ಆದ್ರೆ 2023ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕಾನೂನಿನಲ್ಲಿ ಚುನಾವಣಾ ಆಯುಕ್ತರನ್ನ ಸೆಲೆಕ್ಟ್‌ ಮಾಡೋ ಕಮಿಟಿಯಿಂದ CJI ಅವ್ರನ್ನ ಹೊರತುಪಡಿಸಲಾಯ್ತು. ಸೋ ಈ ಕಾನೂನು ಅಡಿಯಲ್ಲಿ ಸೆಲೆಕ್ಟಾಗಿರೋ ಕಾನೂನು ಆಯುಕ್ತರ ನೇಮಕಾತಿ ತಡೆ ಹಿಡೀರಿ. ಮುಖ್ಯನ್ಯಾಯಮೂರ್ತಿಗಳ ಉಪಸ್ಥಿತಿಯಿಲ್ದೇ ಆಯುಕ್ತರನ್ನ ನೇಮಕ ಮಾಡೋದು ಸರಿಯಲ್ಲ ಅಂತ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ADR) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

-masthmagaa.com

Contact Us for Advertisement

Leave a Reply