ಮದರಸಾ ಕಾನೂನು ರದ್ದು ಮಾಡಿದ್ದ ಹೈ ಕೋರ್ಟ್‌ ಆದೇಶಕ್ಕೆ ಸುಪ್ರೀಂ ಸ್ಟೇ!

masthmagaa.com:

ಉತ್ತರಪ್ರದೇಶದಲ್ಲಿ ಮದರಸಾಗಳ ವಿಚಾರವಾಗಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶ ಒಂದಕ್ಕೆ ಸುಪ್ರೀಂ ಕೋರ್ಟ್‌ ಸ್ಟೇ ತಂದಿದೆ. ಕಳೆದ ತಿಂಗಳು ಯುಪಿ ಮದರಸಾಗಳಿಗೆ ಸಂಬಂಧಿಸಿದ 2004ರ ಉತ್ತರಪ್ರದೇಶ ಮದರಸಾ ಆಕ್ಟ್‌ನ್ನ ಅಸಂವಿಧಾನಿಕ ಅಂತ ಹೈ ಕೋರ್ಟ್‌ ಹೇಳಿತ್ತು. ಈ ಕಾಯ್ದೆ ಜಾತ್ಯಾತೀಯತೆಯ ತತ್ವಕ್ಕೆ ವಿರುದ್ಧವಾಗಿದೆ ಅಂತೇಳಿತ್ತು. ಅಲ್ಲದೆ ಯೋಗಿ ಸರ್ಕಾರಕ್ಕೆ ಮದರಸಾಗಳಲ್ಲಿದ್ದ 17 ಲಕ್ಷ ವಿದ್ಯಾರ್ಥಿಗಳು ಹಾಗೂ 10 ಸಾವಿರ ಶಿಕ್ಷಕರನ್ನ ಸಾಮಾನ್ಯ ಶಾಲೆಗಳಿಗೆ ಸೇರಿಸೋಕೆ ಆದೇಶ ನೀಡಿತ್ತು. ಈಗ ಈ ಆದೇಶವನ್ನ ತಡೆದಿರೋ ಸುಪ್ರೀಂ ಕೋರ್ಟ್‌, ಹೈ ಕೋರ್ಟ್‌ನಲ್ಲಿ ಈ ಕಾಯ್ದೆ ವಿಚಾರವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಮದರಸಾದಲ್ಲಿ ಜಾತ್ಯಾತೀತ ಶಿಕ್ಷಣ ಒದಗಿಸಲಾಗ್ತಿದೆಯಾ ಅನ್ನೋದನ್ನ ವಿಚಾರಣೆ ಮಾಡೋದಷ್ಟೇ ಹೈ ಕೋರ್ಟ್‌ ಮುಂದಿದ್ದ ಪ್ರಶ್ನೆ. ಈ ಕಾಯ್ದೆ ಅಡಿಯಲ್ಲಿ ಮದರಸಾ ಬೋರ್ಡ್‌ ಸ್ಥಾಪನೆ ಆಗೋದು ಮದರಸಾಗಳನ್ನ ನಿಯಂತ್ರಣ ಮಾಡೋಕಷ್ಟೆ. ಇದ್ರಿಂದ ಜಾತ್ಯಾತೀಯತೆಗೆ ಧಕ್ಕೆ ಬರೋದಿಲ್ಲ ಅಂತೇಳಿದೆ. ಅಲ್ಲದೆ ಹೈಕೋರ್ಟ್‌ ಆದೇಶದ ವಿರುದ್ಧವಾಗಿ ಯೋಗಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಗೆ ಚೀಫ್‌ ಜಸ್ಟೀಸ್‌ ಡಿವೈ ಚಂದ್ರಚೂಡ್‌ ನೇತೃತ್ವದ ಪೀಠ ನೋಟಿಸ್‌ ನೀಡಿದೆ.

-masthmagaa.com

Contact Us for Advertisement

Leave a Reply